ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳ ಸಾಧನೆ ಸಂಭ್ರಮ: ಪ್ರತಿಯೊಬ್ಬರೂ ಭಾವಪೂರ್ಣಗೊಂಡಾಗ...

Published 16 ಮಾರ್ಚ್ 2024, 23:45 IST
Last Updated 16 ಮಾರ್ಚ್ 2024, 23:45 IST
ಅಕ್ಷರ ಗಾತ್ರ

ಕಣ್ಣಾಲಿ ತೇವಗೊಳಿಸಿದ ನೃತ್ಯ

ಮಹಿಳೆಯರು ಅನುಭವಿಸುವ ನೋವು ಮತ್ತು ಸಾಧನೆ ಕುರಿತು ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯವು ಸಭಿಕರ ಕಣ್ಣಾಲಿಗಳನ್ನು ತೇವಗೊಳಿಸಿತು.

ಹೆಣ್ಣು ಭ್ರೂಣದಲ್ಲಿದ್ದ ಮಗು, ಹೊರಜಗತ್ತಿಗೆ ಕಾಲಿಟ್ಟು ನಾನಾ ರೂಪದಲ್ಲಿ ಬೆಳವಣಿಗೆ ಹೊಂದುವವರೆಗಿನ ಸನ್ನಿವೇಶಗಳನ್ನು ನೃತ್ಯರೂಪಕದ ಮೂಲಕ ಮನೋಜ್ಞವಾಗಿ
ತಿಳಿಸಿ ಕೊಡಲಾಯಿತು.

ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯರೂಪಕದ ದೃಶ್ಯ
ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯರೂಪಕದ ದೃಶ್ಯ

‘ಹೆಣ್ಣು ಅಬಲೆಯಲ್ಲ, ಸಬಲೆ. ತಾಳ್ಮೆ ಕಳೆದುಕೊಂಡರೆ, ರಣಚಂಡಿಯೂ ಆಗುತ್ತಾಳೆ’ ಎಂಬ ಸನ್ನಿವೇಶ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ವೇದಿಕೆಯ ಅಷ್ಟದಿಕ್ಕುಗಳಿಂದ ಹೊರಹೊಮ್ಮಿದ ಸಂಗೀತದ ಝಲಕ್‌ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಧ್ವನಿ–ಬೆಳಕಿನ ಆಟ ಮನಸೂರೆಗೊಂಡಿತು.

ಸಾಧನೆಗೆ ನೀವೇ ಸ್ಫೂರ್ತಿ...

ಮೂರು ಗಂಟೆಗೂ ಹೆಚ್ಚು ಹೊತ್ತು ನಡೆದ ಸಾಧಕಿಯರ ಕಾರ್ಯಕ್ರಮವು ಎಲ್ಲರನ್ನೂ ಭಾವಪೂರ್ಣಗೊಳಿಸಿತು. ಸಾಧಕಿಯರ ಜೊತೆ ಬಂದ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಗಡಿಗರು ಅಲ್ಲದೇ ವಿವಿಧ ಕ್ಷೇತ್ರಗಳಿಂದ ಬಂದ ಪ್ರಮುಖರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.

ಸಾಧಕಿಯರ ಕುರಿತು ಒಂದೊಂದು ವಿಡಿಯೊ ಪ್ರಸಾರವಾದಾಗ ಮತ್ತು ಸಾಧನೆಯ ವಿವರ ಹೇಳುವಾಗ, ಎಲ್ಲರೂ ಆಸಕ್ತಿಯಿಂದ ನೋಡಿದರು ಮತ್ತು ಆಲಿಸಿದರು. ಕಷ್ಟಪಟ್ಟು ಸಮಾಜಕ್ಕೆ ಕೊಡುಗೆ ಮತ್ತು ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡಿದವರನ್ನೇ ಆಯ್ಕೆ ಮಾಡಲಾಗಿದೆ ಎಂದು ಹಲವರು ಹೇಳಿದರು. ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಸಾಧಕಿಯರನ್ನು ಮಾತನಾಡಿಸಿದರು. ‘ನಿಮ್ಮ ಸಾಧನೆಯೇ ನಮಗೆಲ್ಲರಿಗೂ ಸ್ಫೂರ್ತಿ’ ಎಂದು ಹಲವರು ಹೇಳಿ, ಅಭಿನಂದಿಸಿದರು. ಹಲವರು ಸೆಲ್ಫಿ ಕಿಕ್ಕಿಸಿಕೊಂಡರು.

ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯರೂಪಕದ ದೃಶ್ಯ
ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯರೂಪಕದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT