ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿಯಲ್ಲಿ ಅವಳೇ ಕೂರಬೇಕಿದೆ: ಗ್ರಾಮ ಪಂಚಾಯ್ತಿ ಸದಸ್ಯೆ ಸವಿತಾ ಪಾತ್ರೋಟಿ ಮಾತು

Last Updated 6 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅವಳ (ಮಹಿಳೆ) ಕುರ್ಚಿಯಲ್ಲಿ ಇನ್ನಾರೋ ಬಂದು ಕೂರುವ ಸಂಪ್ರದಾಯ ಬಹುತೇಕ ಪಂಚಾಯ್ತಿಗಳಲ್ಲಿದೆ. ಆದರೆ ನಮ್ಮೂರ ಪಂಚಾಯ್ತಿಯಲ್ಲಿ ಮಾತ್ರ ಆ ಜಾಗದಲ್ಲಿ ಅವಳೇ ಕೂತು ಅಧಿಕಾರ ನಡೆಸಬೇಕು. ಮತ್ತೊಬ್ಬರಿಗೆ ಅವಕಾಶ ನೀಡೊಲ್ಲ. ಊರ ಜನರ ಸಮಸ್ಯೆಗೆ ಆಕೆಯೇ ಮುಕ್ತವಾಗಿ ಸ್ಪಂದಿಸಬೇಕು. ಇದು ಇಂದು ನಮ್ಮೆದುರಿಗೆ ಇರುವ ದೊಡ್ಡ ಸವಾಲು ಹೌದು. ಅದನ್ನು ನಿಭಾಯಿಸಿಯೇ ತೀರುತ್ತೇವೆ. ಹೆಣ್ಣು ಮಕ್ಕಳು ಮನೆಯಲ್ಲಿ ಇರಲು ಲಾಯಕ್ಕು, ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದು ಈಗ ಸವಕಲು ಮಾತು. ಜಗತ್ತು ಏನಿದೆ ಎಂಬುದನ್ನು ಆಕೆಯೂ ಈಗ ಅರಿತಿದ್ದಾಳೆ. ಹೊರಗಿನ ಪ್ರಪಂಚದ ಜ್ಞಾನವೂ ಅಕೆಗೂ ಇದೆ. ಹೀಗಾಗಿ ಅಧಿಕಾರದ ದಂಡ ಹಿಡಿಯಲು ನಮಗೆ ಯಾರೂ ಊರುಗೋಲು ಆಗಬೇಕಿಲ್ಲ.

ನಸುಕು ಹರಿಯುವ ಮುನ್ನ ಚೊಂಬು ಹಿಡಿದು ಮರೆಯ ಅರಸುತ್ತಾ ಹೋಗುವುದು ನಮ್ಮೂರ ಹೆಣ್ಣುಮಕ್ಕಳಿಗೆ ಜನ್ಮದತ್ತ ಬಳುವಳಿಯಾಗಿ ಬಂದ ಶಾಪ. ಶೌಚಾಲಯ ಕಟ್ಟಿಸಿಕೊಟ್ಟು ಅದನ್ನು ಬಳಸುವುದಕ್ಕೆ ಅವರಲ್ಲಿ ತಿಳಿವಳಿಕೆ ಮೂಡಿಸಿ ಬಯಲು ಬಹಿರ್ದೆಸೆ ಎಂಬ ಕಳಂಕದಿಂದ ಹೊರ ತರಲು ಮುಂದಾಗುವೆ. ಜಾಬ್‌ ಕಾರ್ಡ್ ಕೊಡಿಸಿ ಉದ್ಯೋಗ ಖಾತರಿಯಡಿ ಅವರಿಗೆ ಕೆಲಸಕೊಡಿಸಿ ಅನ್ನಕ್ಕೆ ದಾರಿ ಮಾಡಿಕೊಡುವೆ. ನನ್ನ ಪಾಲಿಗೆ ಸ್ತ್ರೀ ಅಸ್ಮಿತೆ ಎಂದರೆ ಇದೇ ನೋಡಿ.

ನಿರೂಪಣೆ: ವೆಂಕಟೇಶ ಜಿ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT