ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮಿಲಿಯೊ ವಿಶ್ವದ ಅತ್ಯಂತ ಹಿರಿಯ ಅಜ್ಜ: ಗಿನ್ನಿಸ್‌ ದಾಖಲೆ

Last Updated 30 ಜೂನ್ 2021, 12:08 IST
ಅಕ್ಷರ ಗಾತ್ರ

ಲಂಡನ್‌: ಪೋರ್ಟೊ ರಿಕೊದ ಎಮಿಲಿಯೊ ಫ್ಲಾರಸ್‌ ಮಾರ್ಕ್ವಝ್‌ ವಿಶ್ವದ ಅತಿ ಹಿರಿಯ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಎಮಿಲಿಯೊ ಅ‌ವರಿಗೆ 112 ವರ್ಷ 326 ದಿನಗಳಾಗಿದ್ದು, ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

1908ರಲ್ಲಿ ಕೊರೊಲಿನಾದಲ್ಲಿ ಜನಿಸಿರುವ ಎಮಿಲಿಯೊ ಅವರನ್ನು ಗುರುತಿಸಿ ಗಿನ್ನಿಸ್‌ ದಾಖಲೆಯ ಪ್ರಮಾಣವನ್ನು ಬುಧವಾರ ನೀಡಲಾಗಿದೆ.

‘ಬಹುವರ್ಷಗಳ ಕಾಲ ಬದುಕಬೇಕಾದರೆ ಪ್ರೀತಿಸುವುದನ್ನು ಕಲಿಯಬೇಕು. ಇನ್ನೊಬ್ಬರ ಬಗ್ಗೆ ಸಹಾನುಭೂತಿ ಹೊಂದಿರಬೇಕು’ ಎಂದು ಎಮಿಲಿಯೊ ಹೇಳಿದ್ದಾರೆ.

‘ನನ್ನ ತಂದೆ ಪ್ರೀತಿಯಿಂದ ನನ್ನನ್ನು ಬೆಳೆಸಿದರು. ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು ಎನ್ನುವುದನ್ನು ತಂದೆಯೇ ಕಲಿಸಿದರು. ಎಲ್ಲರಿಗೂ ಒಳ್ಳೆಯದನ್ನು ಮಾಡು. ಇನ್ನೊಬ್ಬರ ಜತೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೇನೆ. ಕ್ರೈಸ್ತ ನನ್ನ ಜತೆಗಿದ್ದಾನೆ ಎನ್ನುವ ನಂಬಿಕೆ ಇದೆ. ಇಷ್ಟು ವರ್ಷಗಳ ಕಾಲ ಈ ತತ್ವಗಳ ಆಧಾರದ ಮೇಲೆ ಬದುಕಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಎಮಿಲಿಯೊ ಕಬ್ಬು ಬೆಳೆಯುವ ಜಮೀನಿನಲ್ಲಿ ಕೆಲಸ ಮಾಡಿದ್ದು, ಮೂರು ವರ್ಷಗಳ ಕಾಲ ಮಾತ್ರ ಶಾಲೆಗೆ ಹೋಗಿದ್ದಾರೆ.

ಎಮಿಲಿಯೊ ಪತ್ನಿ ಆಂಡ್ರಿಯಾ ಪೆರೆಝ್‌ ಡೆ ಫ್ಲಾರಸ್‌ 75 ವರ್ಷಗಳಾಗಿದ್ದಾಗ ಅಂದರೆ 2010ರಲ್ಲಿ ಸಾವಿಗೀಡಾಗಿದ್ದಾರೆ. ಎಮಿಲಿಯೊ ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಈ ಹಿಂದೆ ಅತ್ಯಂತ ಹಿರಿಯಜ್ಜನ ಸ್ಥಾನದಲ್ಲಿದ್ದು, ಗಿನ್ನಿಸ್‌ ವಿಶ್ವ ದಾಖಲೆ ಸ್ಥಾಪಿಸಿದ್ದ ರೊಮೆನಿಯಾದ ಡುಮಿತ್ರು ಕೊಮಾನೆಸ್ಕು 2020ರ ಜೂನ್‌ 27ರಂದು ನಿಧನರಾಗಿದ್ದರು. ಇವರಿಗೆ 111 ವರ್ಷ 219 ದಿನಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT