ಮಂಗಳವಾರ, ಜನವರಿ 18, 2022
22 °C

ಆಸ್ಟ್ರೇಲಿಯಾಕ್ಕೂ ವ್ಯಾಪಿಸಿದ ಓಮಿಕ್ರಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂ ಸೌತ್‌ ವೇಲ್ಸ್‌ (ಆಸ್ಟ್ರೇಲಿಯಾ):  ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್‌ನ ಎರಡು ಸೋಂಕು ಪ್ರಕರಣಗಳು ಈಗ ಆಸ್ಟ್ರೇಲಿಯಾದಲ್ಲೂ ಪತ್ತೆಯಾಗಿವೆ. 

ನ್ಯೂ ಸೌತ್‌ ವೇಲ್ಸ್‌ನ ಆರೋಗ್ಯ ಆಧಿಕಾರಿಗಳು ಸಾಗರೋತ್ತರ ಪ್ರಯಾಣಿಕರ ತುರ್ತು ತಪಾಸಣೆ ನಡೆಸಿದ ನಂತರ ಪ್ರಕರಣಗಳು ದೃಢವಾಗಿವೆ. 

ಕೊರೊನಾ ವೈರಸ್‌ನ ರೂಪಾಂತರ ತಳಿಯಾಗಿರುವ ಓಮಿಕ್ರಾನ್‌ ಮೊದಲಬಾರಿಗೆ ಹೊಮ್ಮಿದ್ದು ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ. ಸದ್ಯ ಇದು ಹಾಂಕಾಂಗ್‌, ಬ್ರಿಟನ್‌, ಜರ್ಮನಿಗಳಲ್ಲಿ ಕಾಣಸಿಕೊಂಡಿದೆ. 

ಭಾನುವಾರ ಆಫ್ರಿಕಾದಿಂದ ಸಿಡ್ನಿಗೆ ಬಂದ 14 ಮಂದಿಯ ತಪಾಸಣೆ ನಡೆಸಲಾಯಿತು. ಅದರಲ್ಲಿ ಇಬ್ಬರಿಗೆ ಕೋವಿಡ್‌ ಪಾಸಿಟಿವ್‌ ಇರುವುದು ಗೊತ್ತಾಗಿದೆ. ಅವರಲ್ಲಿ ಪತ್ತೆಯಾದ ಕೊರೊನಾ ವೈರಸ್‌ನ ವಂಶವಾಹಿ ಅಧ್ಯಯನವನ್ನು ಕೂಡಲೇ ನಡೆಸಲಾಯಿತು ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ. 

ಸೋಂಕು ಪತ್ತೆಯಾದ ಇಬ್ಬರೂ ಲಕ್ಷಣ ರಹಿತರಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ ಪ್ರಯಾಣಿಕರನ್ನೂ ಪ್ರತ್ಯೇಕಗೊಳಿಸಲಾಗಿದೆ.  

ಓಮಿಕ್ರಾನ್‌ ವೈರಸ್‌ ಅತ್ಯಂತ ವೇಗವಾಗಿ ಪ್ರಸರಣೆ ಹೊಂದುವ ಸಾಮರ್ಥ್ಯವುಳ್ಳದ್ದಾಗಿದ್ದು, ಆತಂಕಕಾರಿ ಎನಿಸಿಕೊಂಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು