ಭಾನುವಾರ, ನವೆಂಬರ್ 29, 2020
19 °C
1900ರಲ್ಲಿ ಶೇ 73.7ರಷ್ಟು ಮತದಾನವಾಗಿತ್ತು: ತಜ್ಞರ ಅಭಿಮತ

ಅಮೆರಿಕ ಚುನಾವಣೆ: 120 ವರ್ಷಗಳಲ್ಲಿ ಅತಿ ಹೆಚ್ಚು ಮತದಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯು 120 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾದ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಚುನಾವಣಾ ತಜ್ಞರು ಹೇಳಿದ್ದಾರೆ.

ಅಮೆರಿಕದ ಈ ಚುನಾವಣೆಯಲ್ಲಿ ಪ್ರಾಥಮಿಕವಾಗಿ ಅಂದಾಜಿಸಿದ ಪ್ರಕಾರ ಈ ವರ್ಷ 23.9 ಕೋಟಿ ಮತದಾರರು  ಮತದಾನದ ಅರ್ಹತೆ ಪಡೆದಿದ್ದರು. ಅದರಲ್ಲಿ 16 ಕೋಟಿ ಜನರು ಮತ ಚಲಾಯಿಸಿದ್ದಾರೆ. ಈ ಕುರಿತು ಸ್ಪಷ್ಟ ಅಂಕಿ ಅಂಶ ಕೆಲ ದಿನಗಳಲ್ಲಿ ತಿಳಿಯಲಿದೆ.

ನವೆಂಬರ್ 3ರಂದು ನಡೆದ ಈ ಚುನಾವಣೆಯಲ್ಲಿ ಶೇ 66.9ರಷ್ಟು ಮತದಾನವಾಗಿದೆ. ಇದು 1900ನೇ ಇಸವಿಯ ನಂತರ ಅತಿ ಹೆಚ್ಚು ಮತದಾನವಾದ ಚುನಾವಣೆಯಾಗಿದೆ. 1900ನೇ ಸಾಲಿನ ಚುನಾವಣೆಯಲ್ಲಿ ಶೇ 73.7ರಷ್ಟು ಮತದಾನವಾಗಿತ್ತು. 2008ರಲ್ಲಿ ಶೇ 58 ಮತ್ತು 2016ರಲ್ಲಿ ಶೇ 56 ರಷ್ಟು ಮತದಾನವಾಗಿತ್ತು.

‘120 ವರ್ಷಗಳಲ್ಲೇ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇನ್ನೂ ಮತ ಎಣಿಕೆ ಕಾರ್ಯ ಮುಂದುವರಿದಿದೆ‘ ಎಂದು ಫ್ಲಾರಿಡಾ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೈಖೆಲ್ ಪಿ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು