ಮಂಗಳವಾರ, ಅಕ್ಟೋಬರ್ 20, 2020
26 °C

ಕಿಲಿಮಾಂಜರೊ: ಬೆಂಕಿ ನಂದಿಸುವ ಕಾರ್ಯದಲ್ಲಿ 500 ಸ್ವಯಂ ಸೇವಕರು

ಎಪಿ Updated:

ಅಕ್ಷರ ಗಾತ್ರ : | |

Prajavani

ನೈರೋಬಿ (ಕೆನ್ಯಾ): ಆಫ್ರಿಕಾದ ಅತಿ ಎತ್ತರದ ಶಿಖರವಾದ ಮೌಂಟ್‌ ಕಿಲಿಮಾಂಜರೊದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 500ಕ್ಕೂ ಹೆಚ್ಚು ಸ್ವಯಂಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಾಂಜೇನಿಯಾದ ಅಧಿಕಾರಿಗಳು ತಿಳಿಸಿದರು. 

‘ಸ್ವಯಂಸೇವಕರು ಸ್ವಲ್ಪಮಟ್ಟಿಗೆ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಕಿಫುನಿಕಾ ಬೆಟ್ಟದಲ್ಲಿ ಬೆಂಕಿ ಉರಿಯುತ್ತಿದೆ’ ಎಂದು ತಾಂಜೇನಿಯಾದ ರಾಷ್ಟ್ರೀಯ ಉದ್ಯಾನದ ವಕ್ತಾರ ಪ್ಯಾಸ್ಕಲ್ ಶೆಲುಟೆಟೆ ಅವರು ಹೇಳಿದರು.

‘ಬೆಂಕಿಯಿಂದಾಗಿ ಸುಮಾರು 28 ಚದರ ಕಿ.ಮೀ ವ್ಯಾಪ್ತಿಯಲ್ಲಿ ಸಸ್ಯ ಸಂಕುಲ ನಾಶವಾಗಿದೆ. ಶಿಖರಕ್ಕೆ ಭೇಟಿ ನೀಡಿದ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ’ ಎಂದು ತಾಂಜೇನಿಯಾ ರಾಷ್ಟ್ರೀಯ ಉದ್ಯಾನದ ಮುಖ್ಯಸ್ಥ ಅಲನ್ ಕಿಜಾಜಿ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು