ಸೋಮವಾರ, ಸೆಪ್ಟೆಂಬರ್ 20, 2021
26 °C

ಮಾರಿಬ್‌: 80 ಉಗ್ರರು; 18 ಸೈನಿಕರು ಹತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ (ಎಎಫ್‌ಪಿ): ಯೆಮೆನ್‌ನ ಭದ್ರಕೋಟೆ ಮಾರಿಬ್ ನಗರಕ್ಕಾಗಿ ನಡೆದ ಹೋರಾಟದಲ್ಲಿ ಸುಮಾರು 80 ಬಂಡುಕೋರರು ಮತ್ತು ಸರ್ಕಾರದ 18 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಸೇನಾ ಮೂಲ
ಗಳು ಬುಧವಾರ ಎಎಫ್‌ಪಿಗೆ ತಿಳಿಸಿವೆ.

‘60 ಮಂದಿ ಹುತಿ ಬಂಡುಕೋರರು ಹತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ 24 ಗಂಟೆಗಳಲ್ಲಿ ನಡೆಸಿದ ವಾಯುದಾಳಿಯಲ್ಲಿ ಹತರಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ನಡೆದ ಘರ್ಷಣೆಯಲ್ಲಿ ಸರ್ಕಾರಿ ಪರವಾದ 18 ಸೈನಿಕರು ಹತರಾಗಿದ್ದು, ಡಜನ್‌ಗಟ್ಟಲೆ ಸೈನಿಕರು ಗಾಯಗೊಂಡಿದ್ದಾರೆ’ ಎಂದು  ಸರ್ಕಾರಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಬೆಂಬಲವಿರುವ ಯೆಮೆನ್ ಸರ್ಕಾರ ಮತ್ತು ಇರಾನ್ ಮಿತ್ರಪಡೆ ಹುತಿ ಬಂಡುಕೋರರ ನಡುವಿನ ಯುದ್ಧಗಳು ಇತ್ತೀಚಿನ ದಿನಗಳಲ್ಲಿ ಮರೀಬ್ ಪ್ರಾಂತ್ಯದಲ್ಲಿ ತೀವ್ರಗೊಂಡಿವೆ. ವಾಯು ದಾಳಿಗಳೂ ತೀವ್ರಗೊಂಡಿವೆ. ಸೇನಾಪಡೆಗಳು ದಂಗೆಕೋರರನ್ನು ಹಿಮ್ಮೆಟ್ಟಿಸಿವೆ’ ಎಂದು ಹೆಸರು ಬಹಿರಂಗಪಡಿಸದ ಸೇನಾಧಿಕಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು