ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿಗೆ ತೆರಳಲು ಇನ್ನು ಬೂಸ್ಟರ್ ಡೋಸ್‌ ಕಡ್ಡಾಯ

Last Updated 18 ಜನವರಿ 2022, 14:02 IST
ಅಕ್ಷರ ಗಾತ್ರ

ದುಬೈ: ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಜಧಾನಿಯಾಗಿರುವ ಅಬುಧಾಬಿಗೆ ತೆರಳಬೇಕಿದ್ದರೆ ಇನ್ನು ಮುಂದೆ ಬೂಸ್ಟರ್‌ ಡೋಸ್ ಕೋವಿಡ್‌ ಲಸಿಕೆ ಹಾಕಿಸಿರುವುದು ಕಡ್ಡಾಯವಾಗಿದೆ.

ಪಕ್ಕದ ದುಬೈ ನಗರದಲ್ಲಿ ಈ ನಿಯಮ ಇಲ್ಲ. ಆದರೆ ಅಬುಧಾಬಿಯಲ್ಲಿ ಇದನ್ನು ಕಡ್ಡಾಯಗೊಳಿಸಿದ್ದು, ಎರಡು ಲಸಿಕೆಯ ಜತೆಗೆ ಎರಡನೇ ಲಸಿಕೆ ಪಡೆದ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ಲಸಿಕೆ ಪಡೆದವರಿಗಷ್ಟೇ ಇನ್ನು ಮುಂದೆ ನಗರದೊಳಗಿನ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರದ ಆರೋಗ್ಯ ಆ್ಯಪ್‌ನಲ್ಲಿ ಮಾಹಿತಿ ನೀಡಲಾಗಿದೆ.‌

ಅಬುಧಾಬಿಗೆ ಪ್ರವೇಶಿಸುವುದಕ್ಕೆ ಮೊದಲಾಗಿ ಎರಡು ವಾರಗಳೊಳಗೆ ಮಾಡಿಸಿದ ಕೋವಿಡ್ ನೆಗೆಟಿವ್‌ ವರದಿ ಅಗತ್ಯವಾಗಿದೆ. ಇಂತಹ ನೆಗೆಟಿವ್‌ ವರದಿ ಇದ್ದರೆ ಮಾತ್ರ ‘ಗ್ರೀನ್‌ ಕಾರ್ಡ್‌‘ ಸ್ಥಾನಮಾನ ಉಳಿದಿರುತ್ತದೆ. ‌

ಯುಎಇಯ ಶೇ 90ಕ್ಕಿಂತ ಅಧಿಕ ಜನಸಂಖ್ಯೆಗೆ ಲಸಿಕೆ ಹಾಕಿಸುವ ಮೂಲಕ ಎಲ್ಲ ಅರ್ಹರಿಗೂ ಶೇ 100ರಷ್ಟು ಲಸಿಕೆ ಹಾಕಿಸಿದ ಸಾಧನೆ ಮಾಡಲಾಗಿದೆ. ದೇಶದಲ್ಲಿ ಈಚಿನ ದಿನಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬೂಸ್ಟರ್ ಡೋಸ್‌ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT