ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮಿಲಿಟರಿ ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಫ್ಗನ್‌ ಮಹಿಳೆ

Last Updated 22 ಆಗಸ್ಟ್ 2021, 11:02 IST
ಅಕ್ಷರ ಗಾತ್ರ

ಬರ್ಲಿನ್‌ (ಜರ್ಮನಿ): ಕಾಬೂಲ್‌ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಹಾರಿದ ವಾಯುಪಡೆಯ ಸಿ-17 ವಿಮಾನದಲ್ಲಿ ಅಫ್ಗಾನಿಸ್ತಾನದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕ ಮಿಲಿಟರಿ ಭಾನುವಾರ ಹೇಳಿದೆ.

ಅಫ್ಗಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸಲೆಂದೇ ರ್‍ಯಾಮ್‌ಸ್ಟೈನ್ ವಾಯುನೆಲೆಯನ್ನು ಅಮೆರಿಕ ತಾತ್ಕಾಲಿಕವಾಗಿ ಬಳಸಿಕೊಳ್ಳುತ್ತಿದೆ.

ಈ ಕುರಿತು ಟ್ವೀಟ್‌ ‌ಮಾಡಿರುವ ಅಮೆರಿಕ ಮಿಲಿಟರಿಯ ‘ಏರ್ ಮೊಬಿಲಿಟಿ’ ಕಮಾಂಡ್, ‘ಶನಿವಾರ ವಿಮಾನ ಹಾರಾಟದ ಸಮಯದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಮಾನದಲ್ಲಿ ವಾಯು ಒತ್ತಡವನ್ನು ಹೆಚ್ಚಿಸುವ ಉದ್ದೇಶದಿಂದ, ವಿಮಾನ ಹಾರಾಟದ ಎತ್ತರವನ್ನೂ ಹೆಚ್ಚಿಸಲು ವಿಮಾನದ ಕಮಾಂಡರ್ ನಿರ್ಧರಿಸಿದ್ದರು. ಹೀಗೆ ಮಾಡುವುದರಿಂದ ದೇಹಾರೋಗ್ಯದಲ್ಲಿ ಸ್ಥಿರತೆ ಕಾಪಾಡಬಹುದು ಮತ್ತು ಜೀವ ಉಳಿಸಬಹುದು,‘ ಎಂದು ಹೇಳಿದೆ.

‘ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಬರುತ್ತಲೇ, ಅಮೆರಿಕದ ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿ ಹೆರಿಗೆ ಮಾಡಿಸಿದರು. ಮಹಿಳೆಗೆ ಹೆಣ್ಣು ಮಗು ಜನಿಸಿದೆ. ತಾಯಿ ಮತ್ತು ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಅಮೆರಿಕ ವಾಯುಪಡೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT