ಟಟ್ವಾನ್ (ಟರ್ಕಿ):ತಾಲಿಬಾನ್ ಉಗ್ರರಿಂದ ತಪ್ಪಿಸಿಕೊಂಡು ಬರುತ್ತಿರುವ ಅಫ್ಗಾನಿಸ್ತಾನ ನಿರಾಶ್ರಿತರು, ತಮ್ಮ ನೆಲಕ್ಕೆ ಕಾಲಿರಿಸದಂತೆ ಟರ್ಕಿಯು ತನ್ನ ಗಡಿಯಲ್ಲಿ ಭದ್ರತೆ ಹೆಚ್ಚಿಸಿದೆ.

ಅಫ್ಗಾನ್ ನಿರಾಶ್ರಿತರು ಇರಾನ್‌ನ ಮೂಲಕ ಟರ್ಕಿಯತ್ತ ಹೊರಟಿದ್ದಾರೆ. ಹೀಗಾಗಿ ಟರ್ಕಿಯು ಇರಾನ್ ಗಡಿಯಲ್ಲಿ ಭದ್ರತೆ ಹೆಚ್ಚಿಸಿದೆ. ಹೆಚ್ಚಿನ ಸೇನಾ ತುಕಡಿಗಳನ್ನು ಗಡಿಯತ್ತ ಕಳುಹಿಸುತ್ತಿದೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆಯ ವಾಪಸಾತಿ ಆರಂಭವಾದ ಬೆನ್ನಲ್ಲೇ ಲಕ್ಷಾಂತರ ಜನರು ಟರ್ಕಿಯತ್ತ ಪ್ರಯಾಣ ಆರಂಭಿಸಿದ್ದರು. ಎರಡು-ಮೂರು ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಇರಾನ್ ಮತ್ತು ಟರ್ಕಿಯತ್ತ ಗುಳೆ ಹೋಗಿದ್ದಾರೆ. ಅವರಲ್ಲಿ ಹಲವರು ಟಟ್ವಾನ್ ನಗರದ ರೈಲು ನಿಲ್ದಾಣ, ಹಳಿಗಳ ಬಳಿ ಆಶ್ರಯ ಪಡೆದಿದ್ದಾರೆ. ಆದರೆ ಈಗ ಅಫ್ಗಾನಿಸ್ತಾನವು ತಾಲಿಬಾನಿಗಳ ವಶಕ್ಕೆ ಬಂದ ನಂತರ ಅಲ್ಲಿಂದ ಹೊರಟಿರುವ ಜನರನ್ನು, ಕರೆದುಕೊಳ್ಳಲು ಟರ್ಕಿ ಹಿಂದೇಟು ಹಾಕುತ್ತಿದೆ.

ಟರ್ಕಿಯಲ್ಲಿ ಈಗಾಗಲೇ 4 ಲಕ್ಷ ಅಫ್ಗಾನ್ ಮತ್ತು 36 ಲಕ್ಷ ಸಿರಿಯಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಹೀಗಾಗಿ ನಿರಾಶ್ರಿತರ ವಿರುದ್ಧ ದೇಶದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ.

ನಿರಾಶ್ರಿತರಿಗೆ ಆಶ್ರಯ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಹೀಗಾಗಿ ನಿರಾಶ್ರಿತರು ದೇಶವನ್ನು ಪ್ರವೇಶಿಸುವುದನ್ನು ತಡೆಯು ತ್ತೇವೆ ಎಂದು ಸರ್ಕಾರವು ಘೋಷಿಸಿದೆ.

ಭಾನುವಾರಸಂಜೆ ವೇಳೆಗೆ ಇರಾನ್ ಗಡಿಯಲ್ಲಿ ಒಟ್ಟು 60 ಸಾವಿರ ಅಫ್ಗಾನ್ ನಿರಾಶ್ರಿತರನ್ನು ತಡೆದು ನಿಲ್ಲಿಸಲಾಗಿದೆ. ಇರಾನ್ ಸಹ ಆ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಅಸಹಾಯಕತೆ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.