ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ಅಲ್‌ಖೈದಾ ಮುಂಚೂಣಿ ಕಮಾಂಡರ್‌ ಹತ್ಯೆ: ನ್ಯೂಯಾರ್ಕ್‌ ಟೈಮ್ಸ್‌ ವರದಿ

Last Updated 14 ನವೆಂಬರ್ 2020, 8:39 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್‌: 1998ರಲ್ಲಿ ತಾಂಜಾನಿಯಾ ಮತ್ತು ಕೀನ್ಯಾದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ ಮೇಲೆ ನಡೆದ ಬಾಂಬ್‌ದಾಳಿ ಆರೋಪಿ, ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಅಲ್‌ಖೈದಾ ಸಂಘಟನೆಯ ಎರಡನೇ ಮುಖ್ಯ ಕಮಾಂಡರ್ ಅಬ್ದುಲ್ಲಾ ಅಹ್ಮದ್‌ ಅಬ್ದುಲ್ಲಾನನ್ನು ಆಗಸ್ಟ್‌ ತಿಂಗಳಲ್ಲಿ ಇರಾನ್‌ನಲ್ಲಿ ರಹಸ್ಯವಾಗಿ ಹತ್ಯೆ ಮಾಡಲಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

ಎಫ್‌ಬಿಐ ತನಿಖಾ ಸಂಸ್ಥೆಯ ಮೋಸ್ಟ್‌ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ಅಬ್ದುಲ್ಲಾ ಅಹ್ಮದ್‌ನನ್ನಆಗಸ್ಟ್‌ ತಿಂಗಳಲ್ಲಿ ಅಮೆರಿಕದ ಆದೇಶದ ಮೇರೆಗೆ ಟೆಹ್ರಾನ್‌ನಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಇಸ್ರೇಲಿ ಕಾರ್ಯಕರ್ತರು, ಗುಂಡಿಕ್ಕಿ ಕೊಂದಿದ್ದರೆ ಎಂದು ಗುಪ್ತಚರ ಅಧಿಕಾರಿಗಳು ಟೈಮ್ಸ್‌ಗೆ ಖಚಿತಪಡಿಸಿದ್ದಾರೆ.

ಅಬ್ದುಲ್‌ ಅಹ್ಮದ್‌ ಅಬ್ದುಲ್‌

ಆಗಸ್ಟ್ 7ರಂದು ಆಯೋಜಿಸಲಾಗಿದ್ದ ಆಫ್ರಿಕಾ ಬಾಂಬ್ ಸ್ಫೋಟದ ವಾರ್ಷಿಕೋತ್ಸವದಂದು ನಡೆದ ಈ ದಾಳಿಯನ್ನು ಅಮೆರಿಕ, ಇರಾನ್, ಇಸ್ರೇಲ್ ಅಥವಾ ಅಲ್-ಖೈದಾ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈ ದಾಳಿಯಲ್ಲಿ 224 ಮಂದಿ ಮೃತಪಟ್ಟಿದ್ದರು. 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಅಬ್ದಲ್ಲಾನ ಮಾಹಿತಿ ನೀಡಿದವರಿಗೆ ಅಮೆರಿಕದ ಫೆಡರಲ್ ಅಧಿಕಾರಿಗಳು, ಈ ತನ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ಡಾಲರ್ (₹ 74 ಕೋಟಿ) ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT