ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಸ್ವೀಕರಿಸಿದ ಬಳಿಕ ಗಡಸು ಧ್ವನಿ, ಉಸಿರಾಟಕ್ಕೆ ತೊಂದರೆ

Last Updated 19 ಡಿಸೆಂಬರ್ 2020, 5:39 IST
ಅಕ್ಷರ ಗಾತ್ರ

ಅಲಸ್ಕಾ: ಅಮೆರಿಕದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡ ಮತ್ತೊಬ್ಬ ಆರೋಗ್ಯ ಕಾರ್ಯಕರ್ತೆ ಲಸಿಕೆಯ ತೀವ್ರ ಪ್ರತಿಕ್ರಿಯೆಯಿಂದ ತೊಂದರೆ ಅನುಭವಿಸಿದ್ದಾರೆ. ಇದು ಅಮೆರಿಕದಲ್ಲಿ ಕಂಡುಬಂದ ಎರಡನೇ ಪ್ರಕರಣವಾಗಿದ್ದು, ಅದೂ ಸಹ ಅಲಸ್ಕಾ ರಾಜ್ಯದಲ್ಲೇ ವರದಿಯಾಗಿದೆ.

ಮಹಿಳಾ ವೈದ್ಯೆ ಲಸಿಕೆಯ ತೀವ್ರ ಪ್ರತಿಕ್ರಿಯೆಗೆ ತುತ್ತಾಗಿದ್ದಾರೆ. ಫೇರ್‌ಬ್ಯಾಂಕ್ಸ್‌ನಲ್ಲಿ ಗುರುವಾರ ಲಸಿಕೆ ಸ್ವೀಕರಿಸಿದ ಸುಮಾರು 10 ನಿಮಿಷಗಳ ಬಳಿಕ ಅನಾಫಿಲ್ಯಾಕ್ಟಿಕ್ ಲಕ್ಷಣ ಕಂಡುಬಂದಿದೆ. ನಾಲಿಗೆ ಊತ, ಗಡಸು ಧ್ವನಿ ಮತ್ತು ಉಸಿರಾಟದ ತೊಂದರೆಯಾಗಿದೆ ಎಂದು ವರದಿಯಾಗಿದೆ.

ಬಳಿಕ, ಫೇರ್‌ಬ್ಯಾಂಕ್ಸ್ ಸ್ಮಾರಕ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಎರಡು ಡೋಸ್ ಎಪಿನ್‌ಫ್ರಿನ್ ನೀಡಲಾಗಿದ್ದು, ಸುಮಾರು ಆರು ಗಂಟೆಗಳ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಏಂಜೆಲಿಕ್ ರಾಮಿರೆಜ್, "ಅಲರ್ಜಿ ಪ್ರತಿಕ್ರಿಯೆಗಳು ಅಸಾಮಾನ್ಯವಾಗಿದ್ದರೂ, ಔಷಧಿಗಳು ಮತ್ತು ಲಸಿಕೆಗಳ ಚುಚ್ಚುಮದ್ದು ಪಡೆದಾಗ ಈ ರೀತಿ ಆಗಬಹುದು" ಎಂದು ತಿಳಿಸಿದ್ದಾರೆ.

ಕೋವಿಡ್ ಲಸಿಕೆಯ ತೀವ್ರ ಪ್ರತಿಕ್ರಿಯೆಯ ಬಳಿಕವೂ ಲಸಿಕೆ ಪಡೆಯುವಂತೆ ಬೇರೆಯವರಿಗೆ ಸಲಹೆ ನೀಡುವೆ ಎಂದಿರುವ ಮಹಿಳೆ, ಕೋವಿಡ್‌ನಿಂದ ಜನರು ಸಾಯುವುದನ್ನು ಕಣ್ಣಾರೆ ಕಂಡಿದ್ದೇನೆ. ಕೋವಿಡ್ ಸೃಷ್ಟಿಸುವ ಅನಾಹುತಕ್ಕಿಂತ ಲಸಿಕೆಯ ಪ್ರತಿಕ್ರಿಯೆ ಹೆಚ್ಚೇನಲ್ಲ ಎಂದಿದ್ದಾರೆ.

ಮಂಗಳವಾರ ಕೌಂಟಿಯ ಜುನೌದ ಬಾರ್ಟ್ಲೆಟ್ ಪ್ರಾದೇಶಿಕ ಆಸ್ಪತ್ರೆಯಲ್ಲಿ ಲಸಿಕೆಯ ಗಂಭೀರ ಪ್ರತಿಕ್ರಿಯೆಯ ಮೊದಲ ಪ್ರಕರಣ ಪತ್ತೆಯಾಗಿತ್ತು. ಅನಾಫಿಲ್ಯಾಕ್ಸಿಸ್‌ ಲಕ್ಷಣವಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT