ಬುಧವಾರ, ಆಗಸ್ಟ್ 17, 2022
25 °C

ಮತ ಮರು ಎಣಿಕೆ: ಅರಿಜೋನಾ, ವಿಸ್ಕಾನ್ಸಿನ್‌ನಲ್ಲಿ ಬೈಡನ್‌ಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಜೋ ಬೈಡನ್‌

ವಾಷಿಂಗ್ಟನ್‌: ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬೈಡನ್‌ ಅವರು ಅರಿಜೋನಾ ಮತ್ತು ವಿಸ್ಕಾನ್ಸಿನ್‌ ರಾಜ್ಯಗಳಲ್ಲಿ ವಿಜೇತರಾಗಿದ್ದಾರೆ ಎಂದು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.

ವಿಸ್ಕಾನ್ಸಿನ್‌ನಲ್ಲಿ ಬೈಡನ್‌ ಅವರು, ಟ್ರಂಪ್ ವಿರುದ್ಧ 20,700 ಮತಗಳಿಂದ ಜಯಗಳಿಸಿದ್ದಾರೆ. ಆದರೆ ಡೊನಾಲ್ಡ್‌ ಟ್ರಂಪ್‌ ಅವರು ಮಾತ್ರ ಇದನ್ನು ಸ್ವೀಕರಿಸಲು ಸಿದ್ಧರಿಲ್ಲ.

‘ರಾಜ್ಯ ಮತ್ತು ಫೆಡರಲ್‌ ಕಾನೂನಿನ ಪ್ರಕಾರ ನವೆಂಬರ್‌ 3 ರಂದು ನಡೆದ ಅಧ್ಯಕ್ಷೀಯ ಚುನಾವಣೆಯನ್ನು ಪ್ರಮಾಣೀಕರಿಸುವ ಮೂಲಕ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಜೋ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ದೃಢಿಪಡಿಸುವ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದೇನೆ’ ಎಂದು ವಿಸ್ಕಾನ್ಸಿನ್‌ ಗವರ್ನರ್‌ ಟೋನಿ ಎವರ್ಸ್‌ ತಿಳಿಸಿದರು.

ಟ್ರಂಪ್‌ ಅವರ ಮನವಿಯಂತೆ ವಿಸ್ಕಾನ್ಸಿನ್‌ನಲ್ಲಿ ಎರಡು ಬಾರಿ ಮತ ಎಣಿಕೆ ನಡೆಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬೈಡನ್‌ ಅವರನ್ನು ವಿಜೇತರೆಂದು ಔಪಚಾರಿಕವಾಗಿ ಪ್ರಮಾಣೀಕರಿಸಲಾಗಿದೆ.

ರಿಪಬ್ಲಿಕನ್‌ ಪಕ್ಷದ ಭದ್ರಕೋಟೆಯಾಗಿರುವ ಅರಿಜೋನಾದಲ್ಲೂ ಬೈಡನ್‌ 10,000 ಮತಗಳಿಂದ ಗೆದ್ದಿದ್ದಾರೆ ಎಂದು ಪ್ರಕಟಿಸಲಾಗಿದೆ.

2016ರಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಈ ಎರಡು ರಾಜ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು