ಶುಕ್ರವಾರ, ಜುಲೈ 1, 2022
21 °C

ಲಂಡನ್‌: ಅರಮನೆ ಮೈದಾನಕ್ಕೆ ನುಸುಳಿದ ಶಸ್ತ್ರಸಜ್ಜಿತ ಆರೋಪಿ–ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ರಾಣಿ ಎರಡನೇ ಎಲಿಜಬೆತ್‌ ತಮ್ಮ ಕ್ರಿಸ್‌ಮಸ್‌ ದಿನಗಳನ್ನು ಕಳೆಯುತ್ತಿರುವ ವಿಂಡ್ಸರ್‌ ಅರಮನೆಯ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ಬಂದ ಹಾಗೂ ಶಸ್ತ್ರಾಸ್ತ್ರ ಹೊಂದಿದ್ದ 19 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ. 

95 ವರ್ಷದ ರಾಣಿ ಎಲಿಜಬೆತ್‌ ಕೋವಿಡ್‌ ಪ್ರಕರಣಗಳ ಹೆಚ್ಚಳದ ನಂತರ ನಾರ್ಫೋರ್ಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನಲ್ಲಿ ತಮ್ಮ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆಯನ್ನು ರದ್ದುಗೊಳಿಸಿದ ನಂತರ ಅವರು ಆಗ್ನೇಯ ಇಂಗ್ಲೆಂಡ್‌ನ ಬರ್ಕ್‌ಶೈರ್‌ನಲ್ಲಿಯ ವಿಂಡ್ಸರ್‌ ಅರಮನೆಯಲ್ಲಿ ರಾಜಕುಮಾರ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಅವರೊಂದಿಗೆ ಕ್ರಿಸ್‌ಮಸ್‌ ದಿನಗಳನ್ನು ಕಳೆಯುತ್ತಿದ್ದಾರೆ. 

ಅರಮನೆಯ ಸುರಕ್ಷಿತ ವಲಯವನ್ನು ಉಲ್ಲಂಘಿಸಿ ಆಕ್ರಮಣಕಾರಿ ಶಸ್ತ್ರವೊಂದನ್ನು ಹೊಂದಿದ್ದ ಸೌತ್ಯಾಂಪ್ಟನ್‌ನಿಂದ ಬಂದಿದ್ದ ವ್ಯಕ್ತಿಯನ್ನು  ಬಂಧಿಸಲಾಗಿದೆ. ರಾಜ ಪರಿವಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಘಟನೆಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಆರೋಪಿಯನ್ನು ಈ ಸಮಯದಲ್ಲಿ ಬಂಧನದಲ್ಲಿ ಇರಿಸಲಾಗಿದೆ ಎಂದು ಥೇಮ್ಸ್‌ ವ್ಯಾಲಿ ಮತ್ತು ಮೆಟ್ರೊಪಾಲಿಟನ್‌ ಪೊಲೀಸರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು