ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಅಸ್ಟ್ರಾಜೆನೆಕಾದ ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ

Last Updated 9 ಸೆಪ್ಟೆಂಬರ್ 2020, 5:33 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಸ್ಟ್ರಾಜೆನೆಕಾದ ಕೋವಿಡ್‌–19 ಲಸಿಕೆಯ ಅಂತಿಮ ಹಂತದ ಪ್ರಯೋಗಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

‘ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರಲ್ಲಿ ಅನೇಕರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಇದು ಲಸಿಕೆಯಿಂದಾಗಿ ಉಂಟಾಗಿರುವುದೋ ಅಥವಾಕಾಕತಳಿಯವೋ ಎಂಬುದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕಿದೆ’ ಎಂದು ಕಂಪನಿ ತಿಳಿಸಿದೆ.

ಕಳೆದ ತಿಂಗಳ ಕೊನೆಯಲ್ಲಿ ಆಸ್ಟ್ರಾಜೆನೆಕಾ ಕಂಪನಿಯ ಸಹಯೋಗದಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದಲಸಿಕೆಯ ಅತಿದೊಡ್ಡ ಅಧ್ಯಯನಕ್ಕಾಗಿ ಅಮೆರಿಕಾದಲ್ಲಿ30 ಸಾವಿರ ಜನರನ್ನು ಆಯ್ಕೆ ಮಾಡಲಾಗಿತ್ತು.

ಆಕ್ಸ್‌ಫರ್ಡ್‌ ವಿವಿ ಸಂಶೋಧನೆ ನಡೆಸುತ್ತಿರುವ ಮತ್ತೆರಡು ಲಸಿಕೆಗಳಾದ ಮಾರ್ಡನಾ ಇಂಕ್‌ ಮತ್ತು ಫಿಜರ್‌ ಅನ್ನು ಅಮೆರಿಕದಲ್ಲಿಅಂತಿಮ ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಈ ಎರಡು ಲಸಿಕೆಗಳು ಅಸ್ಟ್ರಾಜೆನೆಕಾಕ್ಕಿಂತ ಪರಿಣಾಮಕಾರಿಯಾಗಿರಲಿವೆ ಎಂದು ಕಂಪನಿ ಹೇಳಿದೆ.

‘ಹಲವು ಹಂತಗಳಲ್ಲಿ ಪ್ರಯೋಗ ನಡೆಸಿದ ನಡೆಸಿದ ಲಸಿಕೆಗಳ ಅಡ್ಡಪರಿಣಾಮಗಳು ಬಹಳ ವಿರಳ. ಒಂದು ವೇಳೆ ಅಂತಿಮ ಹಂತದ ಪ್ರಯೋಗಗಳಲ್ಲಿ ಗುರುತಿಸಲ್ಪಟರೆ, ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದುಹೇಳಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT