ಮಂಗಳವಾರ, ಆಗಸ್ಟ್ 9, 2022
23 °C

ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 20 ಯುವಕರ ನಿಗೂಢ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಕರಾವಳಿ ಪಟ್ಟಣವಾದ ಪೂರ್ವ ಲಂಡನ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ಕನಿಷ್ಠ 20 ಯುವಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಚಳಿಗಾಲದ ಶಾಲಾ ಪರೀಕ್ಷೆಗಳು ಕೊನೆಗೊಂಡ ಹಿನ್ನೆಲೆಯಲ್ಲಿ ಯುವಕರು ಪಾರ್ಟಿ ಮಾಡಲು ನೈಟ್‌ಕ್ಲಬ್‌ಗೆ ತೆರಳಿದ್ದರು. ಆ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ. ಯುವಕರ ಸಾವಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಸ್ಥಳೀಯ ಪತ್ರಿಕೆ ಡೈಲಿ ಡಿಸ್‌ಪ್ಯಾಚ್‌ ವರದಿ ಪ್ರಕಾರ, ಮರಣ ಹೊಂದಿರುವ ಯುವಕರ ದೇಹಗಳ ಮೇಲೆ ಯಾವುದೇ ಗಾಯಗಳು ಗೋಚರವಾಗಿಲ್ಲ.

‘ಈ ಹಂತದಲ್ಲಿ ನಾವು ಸಾವಿನ ಕಾರಣವನ್ನು ದೃಢೀಕರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಗ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ.

‘ಸಾವಿಗೆ ಸಂಭವನೀಯ ಕಾರಣವನ್ನು ಕಂಡುಹಿಡಿಯಲು ನಾವು ಸಾಧ್ಯವಾದಷ್ಟು ಬೇಗ ಶವಪರೀಕ್ಷೆಗಳನ್ನು ನಡೆಸಲಿದ್ದೇವೆ. ಮೃತರ ದೇಹಗಳನ್ನು ಶವಾಗಾರಗಳಿಗೆ ಕೊಂಡೊಯ್ಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು