ಬುಧವಾರ, ನವೆಂಬರ್ 25, 2020
18 °C

ಆಸ್ಟ್ರೇಲಿಯಾ: ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೋವಿಡ್‌ ಹಾಟ್‌ಸ್ಪಾಟ್‌ ರಾಜ್ಯ ವಿಕ್ಟೋರಿಯಾದಲ್ಲಿ ಗುರುವಾರ ಕೇವಲ ಒಂದು ಹೊಸ ಪ್ರಕರಣ ದಾಖಲಾಗಿದೆ.

ಆಸ್ಟ್ರೇಲಿಯಾದ ಕೋವಿಡ್‌–19 ಹಾಟ್‌ಸ್ಪಾಟ್‌ ರಾಜ್ಯ ವಿಕ್ಟೋರಿಯಾದಲ್ಲಿ ಗುರುವಾರ ಕೇವಲ ಒಂದು ಹೊಸ ಕೋವಿಡ್‌ ಪ್ರಕರಣ ವರದಿಯಾಗಿದೆ. ಜೊತೆಗೆ, ಮೆಲ್ಬೋರ್ನ್‌ ನಗರದಲ್ಲಿ ನಾಲ್ಕು ತಿಂಗಳಿನಿಂದ ವಿಧಿಸಿದ್ದ ಲಾಕ್‌ಡೌನ್‌ ಅನ್ನು ತೆರವುಗೊಳಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಕ್ಟೋರಿಯಾ ಆಡಳಿತದ ಮುಖ್ಯಸ್ಥರಾದ ಡೇನಿಯಲ್ ಆಂಡ್ರ್ಯೂಸ್‌, ‘ಕಳೆದ 24 ಗಂಟೆಗಳಲ್ಲಿ ಮೂರು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ, ಅವುಗಳಲ್ಲಿ ಎರಡು ಹಳೆ ಪ್ರಕರಣಗಳಿರಬಹುದು. ಆದರೆ ಇದು ಮತ್ತೊಂದು ಒಳ್ಳೆಯ ದಿನ’ ಎಂದು ತಿಳಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ದಾಖಲಾದ 905 ಸಾವು ಪ್ರಕರಣಗಳಲ್ಲಿ ಶೇಕಡ 90ಕ್ಕಿಂತ ಹೆಚ್ಚು ಪ್ರಕರಣಗಳು ವಿಕ್ಟೋರಿಯಾ ರಾಜ್ಯವೊಂದರಲ್ಲೇ ದಾಖಲಾಗುತ್ತಿದ್ದವು. ಆದರೆ, ಕಳೆದ 24 ಗಂಟೆಗಳಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ರೆಸ್ಟೋರೆಂಟ್‌, ಕೆಫೆಗಳು, ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಈವರೆಗೆ 27,562 ಮಂದಿಗೆ ಸೋಂಕು ದೃಢಪಟ್ಟಿದ್ದು, ಆ ಪೈಕಿ 907 ಮಂದಿ ಮೃತಪಟ್ಟಿದ್ದಾರೆ. ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು