ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ವೀಸಾ ನೀತಿ ವಿರುದ್ಧದ ಆಕ್ಷೇಪಣೆ: ಮರುಪರಿಶೀಲಿಸಲು ಬೈಡನ್ ಆಡಳಿತ ನಿರ್ಧಾರ

Last Updated 13 ಮಾರ್ಚ್ 2021, 6:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿದೇಶಿ ಉದ್ಯೋಗಿಗಳಿಗೆ ನೀಡುವ ಎಚ್‌–1ಬಿ ವೀಸಾ ಸೇರಿದಂತೆ ಡೊನಾಲ್ಡ್ ಟ್ರಂಪ್‌ ಆಡಳಿತದಲ್ಲಿ ರದ್ದುಗೊಳಿಸಿದ್ದ ಮೂರು ನೀತಿಗಳ ಕುರಿತು ಸಲ್ಲಿಸುವ ಆಕ್ಷೇಪಣೆಗಳು ಮತ್ತು ಪ್ರತಿಕೂಲ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ದವಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತ ತಿಳಿಸಿದೆ.

ಬೈಡನ್ ಆಡಳಿತದ ಈ ನಡೆಯಿಂದಾಗಿ ಎಚ್‌1ಬಿ ವೀಸಾ ವಿಚಾರದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ಭಾರತೀಯ ಐಟಿ ವೃತ್ತಿಪರರಿಗೆ ರಕ್ಷಣೆ ದೊರೆಯುವ ಸಾಧ್ಯತೆ ಇದೆ.

‘ವಲಸೆ ನೀತಿ ಸೇರಿದಂತೆ ಈ ಹಿಂದೆ ರದ್ದುಗೊಳಿಸಲಾದ ನೀತಿಗಳ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅದನ್ನು ಮರುಪರಿಶೀಲಿಸಲಾಗತ್ತದೆ‘ ಎಂದುಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ಇಲಾಖೆ ಶುಕ್ರವಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT