ಕೋವಿಡ್: ಪರಿಹಾರ ವಿತರಣೆ–ಮೃದುಧೋರಣೆಗೆ ಬೈಡನ್ ಸೂಚನೆ

ವಾಷಿಂಗ್ಟನ್: ಕೋವಿಡ್–19 ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ವಿತರಿಸಲು ರೂಪಿಸಿರುವ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಡೆಮಾಕ್ರಟಿಕ್ ಸಂಸದರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಪರಿಹಾರ ವಿತರಣೆಯಲ್ಲಿ ಮೃದುಧೋರಣೆ ಇರಲಿ ಎಂದೂ ಕಿವಿಮಾತು ಹೇಳಿದ್ದಾರೆ.
ಕಡಿಮೆ ಆದಾಯ ಹೊಂದಿರುವವರ ಖಾತೆಗೆ ಈ ಯೋಜನೆಯಡಿ ₹ 1 ಲಕ್ಷ ನೇರವಾಗಿ ಪಾವತಿಸಲಾಗುತ್ತದೆ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಸಲುವಾಗಿ 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ಅನ್ನು ಬೈಡನ್ ಘೋಷಿಸಿದ್ದಾರೆ.
ಅಗತ್ಯ ಕಂಡು ಬಂದಲ್ಲಿ ಯೋಜನೆಯಲ್ಲಿ ಬದಲಾವಣೆ ಮಾಡುವ ಸುಳಿವನ್ನೂ ಅವರು ನೀಡಿದ್ದಾರೆ. ‘ಇಷ್ಟೇ ಮೊತ್ತದ ಪ್ಯಾಕೇಜ್ ಇರಬೇಕು ಎಂಬ ನಿರ್ಬಂಧವೇನಿಲ್ಲ. ಹೀಗಾಗಿ ಯೋಜನೆಯ ಅನುಷ್ಠಾನದಲ್ಲಿ ಮೃದು ಧೋರಣೆ ಇರಲಿ. ಜನರಿಗೆ ನೆರವಾಗುವ ಮೂಲಕ ಅವರಲ್ಲಿ ಉತ್ಸಾಹ, ಭದ್ರತೆಯ ಭಾವನೆಯನ್ನು ಮರುಸ್ಥಾಪಿಸಿ’ ಎಂದು ಸಂಸದರಿಗೆ ಅವರು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.