ಗುರುವಾರ , ಮಾರ್ಚ್ 23, 2023
28 °C

ಅಮೆರಿಕ: ಪೊಲೀಸ್‌ ಇಲಾಖೆ ಹಂಗಾಮಿ ಅಧ್ಯಕ್ಷೆಯಾಗಿ ಕಪ್ಪುವರ್ಣೀಯ ಮಹಿಳೆ ನೇಮಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಲೂಯಿಸ್‌ವಿಲ್‌ (ಅಮೆರಿಕ): ಕೆಂಟಕಿಯ ಲೂಯಿಸ್‌ವಿಲ್‌ ಮೆಟ್ರೊ ಪೊಲೀಸ್‌ ಇಲಾಖೆಯ ಹಂಗಾಮಿ ಅಧ್ಯಕ್ಷೆಯಾಗಿ ಕಪ್ಪು ವರ್ಣೀಯ ಮಹಿಳೆ ಯೆವೆಟ್ ಜೆಂಟ್ರಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.

ಈ ಮೂಲಕ ಲೂಯಿಸ್‌ವಿಲ್‌ ಮೆಟ್ರೊ ಪೊಲೀಸ್‌ ಇಲಾಖೆಯಲ್ಲಿ ಹಂಗಾಮಿ ಅಧ್ಯಕ್ಷೆಯಾಗಿ ನೇಮಕಾತಿಗೊಂಡ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.

2014ರಲ್ಲಿ ಯೆವೆಟ್ ಅವರು ಲೂಯಿಸ್‌ವಿಲ್‌ ಮೆಟ್ರೊ ಪೊಲೀಸ್‌ ಇಲಾಖೆಯ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಅವರು ಇಲಾಖೆಯ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೇಯರ್ ಗ್ರೆಗ್ ಫಿಷರ್ ಅವರು ಸೋಮವಾರ ಹೇಳಿದರು.

ಈಗಿನ  ಹಂಗಾಮಿ ಅಧ್ಯಕ್ಷ ರಾಬರ್ಟ್‌ ಶ್ರೋಡರ್ ಅವರು ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. 

ತುರ್ತು ವೈದ್ಯಕೀಯ ಸೇವಾ ಸಿಬ್ಬಂದಿ, ಕಪ್ಪು ವರ್ಣೀಯ ಬ್ರೆನ್ನಾ ಟೇಲರ್ ಅವರ ಹತ್ಯೆಯ ಬಳಿಕ ಇಲ್ಲಿನ ಪೊಲೀಸ್‌ ಇಲಾಖೆ ಮತ್ತು ಕಪ್ಪು ವರ್ಣೀಯರ ನಡುವಿನ ಸಂಬಂಧ ತೀರ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲೇ ಯೆವೆಟ್ ಜೆಂಟ್ರಿ ಅವರನ್ನು ಹಂಗಾಮಿ ಅಧ್ಯಕ್ಷೆಯಾಗಿ ನೇಮಿಸಲಾಗಿದೆ ಎನ್ನಲಾಗಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು