ಭಾನುವಾರ, ಸೆಪ್ಟೆಂಬರ್ 26, 2021
21 °C

ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ರಿಂದ ಬಾಹ್ಯಾಕಾಶ ಯಾತ್ರೆ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ವ್ಯಾನ್ ಹಾರ್ನ್‌, ಅಮೆರಿಕ: ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ ಮಂಗಳವಾರ ತಮ್ಮದೇ ಕಂಪನಿಯ ‘ಬ್ಲೂ ಹೊರಿಜಿನ್’ ಗಗನನೌಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶ ಪ್ರಯಾಣ ಕೈಗೊಂಡರು. ಈ ಮೂಲಕ ಅಂತರಿಕ್ಷಕ್ಕೆ ಪ್ರಯಾಣಿಸಿದ ಎರಡನೇ ಬಿಲಿಯನೇರ್‌ ಎಂಬ ಹಿರಿಮೆಗೆ ಅವರು ಪಾತ್ರರಾದರು.

ಬೆಜೊಸ್‌ ಅವರ ಜೊತೆಗೆ ಸಹೋದರ ಮ್ಯಾಕ್‌, ನೆದರ್‌ಲೆಂಡ್ಸ್‌ನ 18 ವರ್ಷದ ಯುವಕ, ಟೆಕ್ಸಾಸ್‌ನ 82 ವರ್ಷದ ವ್ಯಕ್ತಿಯು ಸೇರಿದಂತೆ ಆಯ್ದ ಪ್ರಯಾಣಿಕರು ಪ್ರಯಾಣಿಸಿದರು.

ಅಪೊಲೊ 11 ಚಂದ್ರಯಾನದ 52ನೇ ವರ್ಷಾಚರಣೆಯ ದಿನವೂ ಇದಾಗಿದ್ದು, ಚಾರಿತ್ರಿಕ ಮಹತ್ವದ ಕಾರಣಕ್ಕಾಗಿ ಬೆಜೊಸ್ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು