ಮಂಗಳವಾರ, ಏಪ್ರಿಲ್ 20, 2021
32 °C

ಭಾರತ್ ಬಯೋಟೆಕ್‌ನಿಂದ 2 ಕೋಟಿ ಕೋವಿಡ್ ಲಸಿಕೆ ಖರೀದಿಸಲಿದೆ ಬ್ರೆಜಿಲ್

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Covid-19 vaccine

ಬ್ರೆಸಿಲಿಯಾ: ಭಾರತ್ ಬಯೋಟೆಕ್‌ನಿಂದ 2 ಕೋಟಿ ಕೋವಿಡ್‌–19 ಲಸಿಕೆ ಖರೀದಿಗೆ ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ. ಮಾರ್ಚ್ – ಮೇ ಅವಧಿಯಲ್ಲಿ ಲಸಿಕೆ ಪೂರೈಕೆಯಾಗಲಿದೆ.

ಮೊದಲ ಹಂತದಲ್ಲಿ ಮಾರ್ಚ್‌ನಲ್ಲಿ 80 ಲಕ್ಷ ಡೋಸ್‌ ಲಸಿಕೆ ದೇಶಕ್ಕೆ ಪೂರೈಕೆಯಾಗಲಿದೆ ಎಂದು ಬ್ರೆಜಿಲ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಓದಿ: 

ಲಸಿಕೆಗಳ ಖರೀದಿ ವೇಗ ಹೆಚ್ಚಿಸಲು ಮತ್ತು ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವ ಸಲುವಾಗಿ ಬಿಡ್ಡಿಂಗ್‌ ಪ್ರಕ್ರಿಯೆಗೆ ಸಂಬಂಧಿಸಿ ಹೊಸ ನಿಯಮಗಳನ್ನು ಕಳೆದ ವಾರ ಪ್ರಕಟಿಸಲಾಗಿತ್ತು ಎಂದು ಸಚಿವಾಲಯ ಹೇಳಿದೆ.

ಬ್ರೆಜಿಲ್‌ನಲ್ಲಿ ಕೋವಿಡ್‌ನಿಂದಾಗಿ ಗುರುವಾರ 1,541 ಮಂದಿ ಮೃತಪಟ್ಟಿದ್ದಾರೆ. ಸಾಂಕ್ರಾಮಿಕ ಆರಂಭವಾದ ಬಳಿಕ ಅಲ್ಲಿ ದಿನವೊಂದರಲ್ಲಿ ಸಂಭವಿಸಿದ ಎರಡನೇ ಅತಿಹೆಚ್ಚು ಸಾವು ಇದಾಗಿದೆ. ಬ್ರೆಜಿಲ್‌ನಲ್ಲಿ ಸೋಂಕಿನಿಂದಾಗಿ ಈವರೆಗೆ 2,51,498 ಮಂದಿ ಮೃತಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು