ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ: ಭಾರತಕ್ಕೆ ಕ್ಯಾಲಿಫೋರ್ನಿಯಾದಿಂದ ಆಮ್ಲಜನಕದ ನೆರವು

Last Updated 27 ಏಪ್ರಿಲ್ 2021, 6:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಅಮೆರಿಕನ್ನರನ್ನು ಹೊಂದಿರುವ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯವು, ಕೋವಿಡ್‌ ವಿರುದ್ಧ ಹೋರಾಡಲುಭಾರತಕ್ಕೆ ಆಮ್ಲಜನಕವನ್ನು ಕಳುಹಿಸಲಿದೆ.

ಸೋಮವಾರ ಕ್ಯಾಲಿಫೋರ್ನಿಯಾದ ಗವರ್ನರ್‌ ಗ್ಯಾವಿನ್‌ ನ್ಯೂಸಮ್‌ ಅವರು ಭಾರತಕ್ಕೆ ಕಳುಹಿಸಲಾಗುತ್ತಿರುವ ಮೊದಲ ವೈದ್ಯಕೀಯ ನೆರವಿನ ಕುರಿತು ಮಾಹಿತಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ‘ಎಲ್ಲರಿಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುವ ಹಕ್ಕಿದೆ. ಕ್ಯಾಲಿಫೋರ್ನಿಯಾವು ಭಾರತದ ಕರೆಗೆ ಓಗೊಟ್ಟು, ಕೋವಿಡ್‌ ವಿರುದ್ಧ ಹೋರಾಡಲು ಸಹಾಯ ಮಾಡಲಿದೆ’ ಎಂದರು.

ಕ್ಯಾಲಿಫೋರ್ನಿಯಾವು 275 ಆಮ್ಲಜನಕ ಪೂರೈಕೆ ಪರಿಕರಗಳು, 440 ಆಮ್ಲಜನಕ ಸಿಲಿಂಡರ್‌ಗಳು, 240 ಆಮ್ಲಜನಕ ನಿಯಂತ್ರಕಗಳು, 210 ಪಲ್ಸ್‌ ಆಕ್ಸಿಮೀಟರ್‌ಗಳು ಮತ್ತು ನಿಮಿಷಕ್ಕೆ 120 ಲೀಟರ್‌ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು, ಡಿಪ್ಲಾಯೇಬಲ್‌ ಆಕ್ಸಿಜನ್‌ ಕಾನ್ಸಟ್ರೇಂಟರ್‌ ಸಿಸ್ಟಂ (ಡಿಒಸಿಎಸ್) ಅನ್ನು ಕಳುಹಿಸಲಿದೆ.

ನ್ಯೂಜೆರ್ಸಿ ಗವರ್ನರ್‌ ಫಿಲ್‌ ಮರ್ಫಿ ಅವರು ಕೂಡ, ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜೀತ್‍ ಸಿಂಗ್ ಸಂಧು ಜತೆಗೆ ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT