ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಕ್ಯಾಪ್ಟನ್ ಹರ್‌ಪ್ರೀತ್ ರಿಂದ ದಕ್ಷಿಣ ಧ್ರುವಕ್ಕೆ ಚಾರಣ

ಈ ಸಾಹಸ ಮೆರೆದ ಭಾರತ ಮೂಲದ ಮೊದಲ ಮಹಿಳೆ ಎಂಬ ಗರಿ
Last Updated 4 ಜನವರಿ 2022, 10:48 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ ಸೇನೆಯಲ್ಲಿ ಅಧಿಕಾರಿಯಾಗಿರುವ ಭಾರತ ಮೂಲದ ಕ್ಯಾಪ್ಟನ್‌ ಹರ್‌ಪ್ರೀತ್ ಚಂಡಿ ಅವರು ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಚಾರಣ ಕೈಗೊಂಡು ಯಶಸ್ವಿಯಾಗಿದ್ದಾರೆ.

ಈ ಸಾಧನೆ ಮಾಡಿರುವ ಭಾರತ ಮೂಲದ ಮೊದಲ ಮಹಿಳೆ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

32 ವರ್ಷದ ಹರ್‌ಪ್ರೀತ್ ಚಂಡಿ ಅವರು ಸೇನೆಯಲ್ಲಿ ಫಿಜಿಯೊಥೆರಪಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ‘ಪೋಲಾರ್‌ ಪ್ರೀತ್‌’ ಎಂದೂ ಖ್ಯಾತರಾಗಿದ್ದಾರೆ.

40 ದಿನಗಳಲ್ಲಿ 1,127 ಕಿ.ಮೀ. ದೂರ ಕ್ರಮಿಸುವ ಮೂಲಕ ಅವರು ಅಂಟಾರ್ಕ್ಟಿಕಾಕ್ಕೆ ಕೈಗೊಂಡಿದ್ದ ಈ ಸಾಹಸಯಾತ್ರೆಯನ್ನು ಪೂರ್ಣಗೊಳಿಸಿದರು. ಚಾರಣ ಮುಕ್ತಾಯಗೊಂಡ ಕುರಿತು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಮೈನಸ್ 50 ಡಿಗ್ರಿ ಸೆಲ್ಸಿಯಸ್‌ ತಾಪಮಾನ, ಇನ್ನೊಂದೆಡೆ ಗಂಟೆಗೆ 60 ಮೈಲು ವೇಗದಲ್ಲಿ ಬೀಸುತ್ತಿದ್ದ ಗಾಳಿ. ಇಂತಹ ಪ್ರತಿಕೂಲ ಹವಾಮಾನದಲ್ಲಿಯೇ ಚಾರಣ ಕೈಗೊಂಡಿದ್ದ ಅವರು, ಚಾರಣದ ಪ್ರತಿ ಹಂತ ಕುರಿತು ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT