ಮಂಗಳವಾರ, ಡಿಸೆಂಬರ್ 7, 2021
23 °C

ಇಂಟರ್‌ಪೋಲ್‌ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿಯಾಗಿ ಪ್ರವೀಣ್ ಸಿನ್ಹಾ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ಪ್ರವೀಣ್‌ ಸಿನ್ಹಾ ಅವರು ಇಂಟರ್‌ಪೋಲ್‌ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿಯಾಗಿ ಗುರುವಾರ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಇಂಟರ್‌ಪೋಲ್‌ನ 89ನೇ ಸಾಮಾನ್ಯ ಸಭೆಯಲ್ಲಿ ವಿವಿಧ ಉನ್ನತ ಹುದ್ದೆಗಳಿಗಾಗಿ ಚುನಾವಣೆ ನಡೆಯಿತು.

ಭಾರತ, ಚೀನಾ, ಸಿಂಗ‍ಪುರ, ರಿಪಬ್ಲಿಕ್‌ ಆಫ್‌ ಕೊರಿಯಾ ಮತ್ತು ಜೋರ್ಡಾನ್ ನಡುವೆ ಎರಡು ಹುದ್ದೆಗಳಿಗಾಗಿ ಭಾರಿ ‍ಪೈಪೋಟಿ ನಡೆಯಿತು. ಈ ಸಂಬಂಧ ಭಾರತದ ರಾಯಭಾರಿಯು ಕಳೆದ ಹಲವು ದಿನಗಳಿಂದ ಟರ್ಕಿಯಲ್ಲಿ ವಿವಿಧ ದೇಶಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ, ಭಾರತ ವಿಶ್ವದಾದ್ಯಂತ ಸಂಘಟಿತ ಅಭಿಯಾನವನ್ನು ನಡೆಸಿತ್ತು ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು