ಬೀಜಿಂಗ್: ಐದೇ ದಿನಗಳಲ್ಲಿ 1,500 ಕೊಠಡಿವುಳ್ಳ ಆಸ್ಪತ್ರೆಯನ್ನು ಬೀಜಿಂಗ್ ನಗರದ ದಕ್ಷಿಣ ಭಾಗದಲ್ಲಿ ಚೀನಾ ಸರ್ಕಾರ ನಿರ್ಮಿಸಿದೆ.

ಕೊರೊನಾ ವೈರಸ್ ಸೋಂಕುಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಈ ಕ್ರಮಕೈಗೊಂಡಿದೆ. ಹ್ಯೂಬೆ ಪ್ರಾಂತ್ಯದಲ್ಲಿ ಒಟ್ಟು 6,500 ಕೊಠಡಿಗಳವುಳ್ಳ ಆರು ಆಸ್ಪತ್ರೆಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯ ಭಾಗವಾಗಿ ಬೀಜಿಂಗ್ ನಗರದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

ಕಳೆದ ವರ್ಷವೂ ಇದೇ ರೀತಿಯಲ್ಲಿ ತ್ವರಿತಗತಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿತ್ತು.

ಶಿಜಿಯಾಝುವಾಂಗ್‌ನಲ್ಲೂ ಈಗಾಗಲೇ 3,000 ಕೊಠಡಿಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಶಿಜಿಯಾಝುವಾಂಗ್‌ನಲ್ಲಿ ಇದುವರೆಗೆ ಒಂದು ಕೋಟಿಗೂ ಹೆಚ್ಚು ಜನರನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಾದ್ಯಂತ ಶುಕ್ರವಾರ 130 ಹೊಸ ಪ‍್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇವುಗಳಲ್ಲಿ 90 ಪ್ರಕರಣಗಳು ಹ್ಯೂಬೆ ಪ್ರಾಂತ್ಯದಲ್ಲಿ ಪತ್ತೆಯಾಗಿವೆ.

ಇದೇ ವೇಳೆ, ಕೊರೊನಾ ವೈರಸ್‌ನ ಮೂಲದ ಪತ್ತೆ ಕುರಿತು ತನಿಖೆ ನಡೆಸಲು ವುಹಾನ್ ನಗರಕ್ಕೆ ಬಂದಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ತಜ್ಞರ ತಂಡ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.