ಗುರುವಾರ , ಜೂನ್ 24, 2021
27 °C

ಕೋವಿಡ್‌: ಚೀನಾದ ದಿಕ್ಕಿನಿಂದ ಮೌಂಟ್‌ ಎವರೆಸ್ಟ್ ಚಾರಣ ರದ್ದು

ಎ‍ಪಿ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ನೇಪಾಳದಲ್ಲಿ ಕೋವಿಡ್‌–19ರ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾವು ತನ್ನ ದಿಕ್ಕಿನಿಂದ ಮೌಂಟ್‌ ಎವರೆಸ್ಟ್‌ ಚಾರಣವನ್ನು ರದ್ದುಗೊಳಿಸಿದೆ.

ಈ ಬಗ್ಗೆ ಚೀನಾದ ಕ್ರೀಡಾ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಋತುವಿನಲ್ಲಿ ಚೀನಾವು ತನ್ನ ದಿಕ್ಕಿನಿಂದ ಮೌಂಟ್‌ ಎವರೆಸ್ಟ್‌ ಏರಲು ಕೇವಲ 38 ಚೀನಿಯರಿಗೆ ಅನುಮತಿ ನೀಡಿತ್ತು. ಆದರೆ ನೇಪಾಳವು 408 ಜನರಿಗೆ ಅನುಮತಿಯನ್ನು ನೀಡಿತ್ತು. ಕಳೆದ ವರ್ಷ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಎರಡೂ ದೇಶಗಳು ಮೌಂಟ್‌ ಎವರೆಸ್ಟ್‌ ಪರ್ವತರೋಹಣವನ್ನು ರದ್ದುಗೊಳಿಸಿದ್ದವು.

ನೇಪಾಳದ ಕಡೆಯಿಂದ ಎವರೆಸ್ಟ್‌ ಪರ್ವತಾರೋಹಣ ಮಾಡುತ್ತಿದ್ದ ಕೆಲವರಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿತ್ತು. ಇತ್ತೀಚೆಗಷ್ಟೇ ನೇಪಾಳ ಕಡೆಯಿಂದ ಪರ್ವತಾರೋಹಣ ಮಾಡುತ್ತಿದ್ದ ಸ್ವಿಸ್‌ ಮತ್ತು ಅಮೆರಿಕದ ತಲಾ ಒಬ್ಬರು ಪ್ರಜೆಗಳು ಅಸುನೀಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು