ಸೋಮವಾರ, ಸೆಪ್ಟೆಂಬರ್ 26, 2022
20 °C

ಅಮೆರಿಕ, ಜಪಾನ್ ಆಗ್ರಹ ಧಿಕ್ಕರಿಸಿ ತೈವಾನ್ ಸುತ್ತ ಸಮರಾಭ್ಯಾಸ ಮುಂದುವರಿಸಿದ ಚೀನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ದ್ವೀಪರಾಷ್ಟ್ರ ತೈವಾನ್‌ ಸುತ್ತಲೂ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕು ಎಂಬ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಆಗ್ರಹವನ್ನು ಚೀನಾ ದಿಕ್ಕರಿಸಿದೆ. ಹೊಸದಾಗಿ ಸಮರಾಭ್ಯಾಸ ನಡೆಸುತ್ತಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಚೀನಾ ಸೇನೆಯ ಪೂರ್ವ ಪಡೆ, ಕಾರ್ಯಾಚರಣೆಗೆ ಸಂಬಂಧಿಸಿದ ಹೇಳಿಕೆ ಬಿಡುಗಡೆ ಮಾಡಿದ್ದು, 'ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ತೈವಾನ್‌ ದ್ವೀಪದ ಸುತ್ತಲಿನ ಸಮುದ್ರ ಮತ್ತು ವಾಯು ಪ್ರದೇಶದಲ್ಲಿ ನಡೆಯಬಹುದಾದ ಆಕ್ರಮಣಗಳನ್ನು ಗಮನದಲ್ಲಿರಿಸಿ ಪ್ರಾಯೋಗಿಕವಾಗಿ ಜಂಟಿ ಸಮರಾಭ್ಯಾಸ ಮುಂದುವರಿಸಿದೆ' ಎಂದು ಪ್ರಕಟಿಸಿದೆ.

ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಬದ್ಧವಾಗಿರುವುದಾಗಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ದೇಶಗಳು ಪ್ರತಿಪಾದಿಸಿವೆ.

ತೈವಾನ್‌ ಭೂ ಪ್ರದೇಶ ತನ್ನದೇ ಎಂದು ಚೀನಾ ವಾದಿಸುತ್ತಿರುವುದರ ನಡುವೆಯೇ, ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಕಳೆದ ವಾರ ತೈವಾನ್‌ಗೆ ಭೇಟಿ ನೀಡಿದ್ದರು. ಇದರಿಂದ ಕೆರಳಿದ ಚೀನಾ, ತೈವಾನ್‌ ಗಡಿಯಲ್ಲಿ ತಾಲೀಮು ಚುರುಕುಗೊಳಿಸಿತ್ತು.

ಚೀನಾದ ಆಕ್ರಮಣಕಾರಿ ಧೋರಣೆಯನ್ನು ಖಂಡಿಸಿದ್ದ ಪೆಲೋಸಿ, ತೈವಾನ್ ಅನ್ನು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸಲು ನಾವು ಬಿಡುವುದಿಲ್ಲ ಕಿಡಿಕಾರಿದ್ದರು.

ಇವನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು