ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೋವಿಡ್ ಹೆಚ್ಚಳ: ರೆಸ್ಟೋರೆಂಟ್‌, ಕಾರ್ಯಕ್ರಮಗಳಿಗೆ ನಿರ್ಬಂಧ

ಅರ್ಧದಷ್ಟು ಜನರು ಮಾತ್ರ ಇರಲು ಅನುಮತಿ
Last Updated 27 ನವೆಂಬರ್ 2022, 6:44 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕಿನ ಲಕ್ಷಣದಲ್ಲಿ ಹೆಚ್ಚಳ ಕಂಡುಬಂದಿದ್ದು, ಶೆಂಝೆನ್ ಪ್ರಾಂತ್ಯದಲ್ಲಿ ರೆಸ್ಟೋರೆಂಟ್ ಮತ್ತು ಇತರ ಒಳಾಂಗಣ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ.

ರೆಸ್ಟೋರೆಂಟ್‌ಗಳಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು, ಮುಂಜಾಗ್ರತಾ ಕ್ರಮವಾಗಿ ಶೇ 50ರಷ್ಟು ಜನರು ಮಾತ್ರ ಇರುವಂತೆ ಆದೇಶ ನೀಡಲಾಗಿದೆ.

ಜತೆಗೆ, ಒಳಾಂಗಣ ಕಾರ್ಯಕ್ರಮಗಳಲ್ಲಿ ಕೂಡ ಶೇ 50ರ ಮಿತಿಯಲ್ಲಿ ಜನರು ಭಾಗವಹಿಸಬಹುದಾಗಿದೆ.

ಶೆಂಝೆನ್ ನಗರಕ್ಕೆ ಹೊಸದಾಗಿ ಬರುವವರು ಸಿನಿಮಾ ಮಂದಿರ, ಜಿಮ್ ಮತ್ತು ಸಾರ್ವಜನಿಕ ಸಭೆಗಳಿಗೆ ಮೂರು ದಿನ ತೆರಳುವಂತಿಲ್ಲ ಎಂದು ಅಲ್ಲಿನ ಆಡಳಿತ ನಿರ್ಬಂಧ ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT