ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಪೊಲೀಸ್‌ ಸರ್ಪಗಾವಲು: ಪ್ರತಿಭಟನೆಗೆ ಅಂಕುಶ

Last Updated 29 ನವೆಂಬರ್ 2022, 18:18 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌/ವಾಷಿಂಗ್ಟನ್‌:ಚೀನಾದಲ್ಲಿ ಸರ್ಕಾರ ಹೇರಿರುವ ಕೋವಿಡ್‌ ಕಠಿಣ ಲಾಕ್‌ಡೌನ್‌ ವಿರುದ್ಧದ ಜನಾಕ್ರೋಶಹತ್ತಿಕ್ಕಲು ಪ್ರತಿ ರಸ್ತೆ, ಬೀದಿಗಳಲ್ಲಿ ಪೊಲೀಸ್‌ ಪಡೆಗಳ ಸರ್ಪಗಾವಲು ‌ನಿಯೋಜಿಸಿರುವುದರಿಂದ ಮಂಗಳವಾರ ದೇಶದಲ್ಲಿ ಹೊಸದಾಗಿ ಎಲ್ಲಿಯೂ ಪ್ರತಿಭಟನೆ ಕಂಡುಬರಲಿಲ್ಲ.

ಬೀಜಿಂಗ್‌,ಶಾಂಘೈ, ನಾನ್‌ಜಿಂಗ್‌ ನಗರಗಳು ಸಹ ಶಾಂತವಾಗಿದ್ದವು. ಬೀಜಿಂಗ್‌ ನಗರದಲ್ಲಿ ಕೋವಿಡ್‌ ಸೋಂಕು ಕಂಡುಬರುವ ಅಪಾರ್ಟ್‌ಮೆಂಟ್‌ಗಳಿಗೆ ಬೀಗಮುದ್ರೆ ಹಾಕುವುದಿಲ್ಲವೆಂದು ನಗರದ ಆಡಳಿತ ಪ್ರಕಟಿಸಿದೆ. ಕೋವಿಡ್‌ ಸೋಂಕು ಶೂನ್ಯಕ್ಕಿಳಿಸುವ ಸರ್ಕಾರದ ಕಠಿಣ ಲಾಕ್‌ಡೌನ್‌ ವಿರೋಧಿಸಿ ಜನಾಕ್ರೋಶ ಕಳೆದ ವಾರ ಭುಗಿಲೆದ್ದಿತ್ತು. ಹಾಂಗ್‌ಕಾಂಗ್‌ನ ಚೀನಿ ವಿಶ್ವವಿದ್ಯಾಲಯದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ಮೇಳದ ಬತ್ತಿ ಬೆಳಗಿ, ಪ್ರತಿಭಟನೆ ಬೆಂಬಲಿಸಿದರು.

‌ಚೀನಾದಲ್ಲಿನ ಬೆಳವಣಿಗೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಗರಿಕರ ಶಾಂತಿಯುತ ಪ್ರತಿಭಟನೆ ಹಕ್ಕನ್ನು ಬೆಂಬಲಿಸಲಾಗುವುದು ಎಂದು ಶ್ವೇತಭವನ ಮಂಗಳವಾರ ಹೇಳಿದೆ. ಬಿಬಿಸಿ ವರದಿಗಾರರೊಬ್ಬರನ್ನುಶಾಂಘೈ ಪೊಲೀಸರು ಥಳಿಸಿ, ಕೈಕೋಳ ಹಾಕಿ ಬಂಧಿಸಿದ ಸಂಬಂಧ ಚೀನಾದ ರಾಯಭಾರಿಗೆ ಬ್ರಿಟನ್‌ ಸಮನ್ಸ್‌ ಜಾರಿ ಮಾಡಿ, ವಿವರಣೆ ಪಡೆದಿದೆ.

‘ವಿದೇಶಿ ಪತ್ರಕರ್ತರು ದೇಶದ ಕಾನೂನುಗಳು ಮತ್ತು ನಿಬಂಧನೆಗಳನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಬೇಕು’ ಎಂದು ಚೀನಾ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT