ಚೀನಾ: ಕೋವಿಡ್ ಪ್ರಕರಣ ಹೆಚ್ಚಳ, ಕೆಲವೆಡೆ ಲಾಕ್ಡೌನ್

ಬೀಜಿಂಗ್: ಚೀನಾದ ಈಶಾನ್ಯ ಭಾಗದಲ್ಲಿ ಕೋವಿಡ್–19ರ ಪ್ರಕಣಗಳಲ್ಲಿ ಏರಿಕೆ ಕಂಡು ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದ ಲಕ್ಷಾಂತರ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದ್ದು, ಕೆಲ ನಗರಗಳಲ್ಲಿ ಲಾಕ್ಡೌನ್ ಸೇರಿದಂತೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
2020ರಲ್ಲಿ ದೇಶವನ್ನು ಕಂಗೆಡಿಸಿದ್ದ ಕೋವಿಡ್ ಅನ್ನು ಲಾಕ್ಡೌನ್, ಸಾಮೂಹಿಕ ಪರೀಕ್ಷೆ, ಸಾರಿಗೆ ನಿರ್ಬಂಧಗಳಂತಹ ಕ್ರಮಗಳಿಂದ ಹತೋಟಿಗೆ ತರಲಾಗಿತ್ತು. ಆದರೆ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ನಿಂದ ದೇಶದ ಹಲವು ನಗರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ.
ಕೋವಿಡ್ ಸಾವು: ಪರಿಹಾರ ಅರ್ಜಿ ಸಲ್ಲಿಕೆಗೆ ಗಡುವು ನಿಗದಿಪಡಿಸಲು ‘ಸುಪ್ರೀಂ’ಗೆ ಮನವಿ
ಜಿಲಿನ್ ಪ್ರಾಂತ್ಯದ ಎರಡನೇ ದೊಡ್ಡ ನಗರವಾದ ಜಿಲಿನ್ನಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಮವಾರ ರಾತ್ರಿಯಿಂದ ಮೂರು ದಿನಗಳ ಕಾಲ ಲಾಕ್ಡೌನ್ ವಿಧಿಸಿ ಸ್ಥಳೀಯ ಆಡಳಿತ ಆದೇಶಿಸಿದೆ. ಈ ನಗರದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆಯಿದೆ.
ಜಿಲಿನ್ ಪ್ರಾಂತ್ಯದ ರಾಜಧಾನಿ ಚಾಂಗ್ಚುನ್ನಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಕೋವಿಡ್: ಭವಿಷ್ಯದ ಅಲೆಗಳಿಂದ ಗಂಭೀರ ಪರಿಣಾಮ ಸಾಧ್ಯತೆ ಕಡಿಮೆ ಎಂದ ತಜ್ಞರು
ಚೀನಾದಾದ್ಯಂತ ಭಾನುವಾರ 4 ಸಾವಿರಕ್ಕಿಂತ ಹೆಚ್ಚು ಕೋವಿಡ್–19ರ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಜಿಲಿನ್ ಪ್ರಾಂತ್ಯದಲ್ಲಿಯೇ ಮೂರನೇ ಎರಡರಷ್ಟು ಪ್ರಕರಣಗಳು ದೃಢಪಟ್ಟಿವೆ.
ರಾಜಧಾನಿ ಬೀಜಿಂಗ್ನ ಪೂರ್ವದಲ್ಲಿರುವ ಟ್ಯಾಂಗ್ಶಾನ್ ನಗರದಲ್ಲಿ ಸೋಂಕು ಹರಡುವಿಕೆ ತಗ್ಗಿಸಲು ಭಾನುವಾರ 24 ಗಂಟೆಗಳ ಕಾಲ ಸಂಚಾರವನ್ನು ನಿಷೇಧಿಸಲಾಗಿತ್ತು. ಅಲ್ಲದೆ ಇಲ್ಲಿನ ಎಲ್ಲ ನಾಗರಿಕರನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.