ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: 20 ಸಾವಿರಕ್ಕೂ ಅಧಿಕ ಜನರು ಕ್ವಾರಂಟೈನ್‌ಗೆ

Last Updated 15 ಜನವರಿ 2021, 12:35 IST
ಅಕ್ಷರ ಗಾತ್ರ

ಬೀಜಿಂಗ್‌: ಉತ್ತರ ಚೀನಾದ ಹಬೆ ಪ್ರಾಂತ್ಯದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಇಲ್ಲಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ 20 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಚೀನಾ ಕ್ವಾರಂಟೈನ್‌ ಮಾಡಿದೆ.

ಹೆಚ್ಚಿನ ಪರೀಕ್ಷೆ, ಪ್ರಯಾಣಕ್ಕೆ ನಿರ್ಬಂಧ ಮುಂತಾದ ಕ್ರಮಗಳ ಮುಖಾಂತರ ಏರಿಕೆಯಾಗುತ್ತಿರುವ ಕೋವಿಡ್‌ ಪ್ರಕರಣಗಳನ್ನು ಚೀನಾ ಹತೋಟಿಗೆ ತಂದಿತ್ತು. ಆದರೆ ಕಳೆದ ಕೆಲ ವಾರದಿಂದ ಉತ್ತರ ಚೀನಾದಲ್ಲಿ ಹೊಸ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಈ ಭಾಗದಲ್ಲಿ ಲಾಕ್‌ಡೌನ್‌ ಹೇರುವ ಸಾಧ್ಯತೆ ಇದೆ. 144 ಹೊಸ ಪ್ರಕರಣಗಳು ಶುಕ್ರವಾರ ದಾಖಲಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ. ಈ ಪೈಕಿ 90 ಜನರು ಹೆಬಿ ಪ್ರಾಂತ್ಯದವರೇ ಆಗಿದ್ದಾರೆ. ಕಳೆದ ಮಾರ್ಚ್‌ನಿಂದ ಒಂದು ದಿನದಲ್ಲಿ ದಾಖಲಾದ ಅತ್ಯಧಿಕ ಪ್ರಕರಣಗಳು ಇದಾಗಿದೆ.

‘ಬುಧವಾರದಿಂದ ಹಳ್ಳಿಯ ನಿವಾಸಿಗಳನ್ನು ಹೋಟೆಲ್‌ಗಳಲ್ಲಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದ್ದು, ಕುಟುಂಬ ಸದಸ್ಯರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ’ ಎಂದು ಸಿಸಿಟಿವಿ ವರದಿ ಮಾಡಿದೆ. ಮುಂದಿನ ತಿಂಗಳು ರಜೆ ಇರುವ ಕಾರಣ, ವಲಸೆ ಕಾರ್ಮಿಕರು ಹಳ್ಳಿಗಳಿಗೆ ಮರಳುವ ಸಾಧ್ಯತೆ ಇದ್ದು, ಸೋಂಕು ಮತ್ತಷ್ಟು ಹರಡುವ ಆತಂಕ ಎದುರಾಗಿದೆ. ಗುರುವಾರ ಚೀನಾದಲ್ಲಿ ಕೋವಿಡ್‌–19ನಿಂದ ಒಂದು ಸಾವು ಸಂಭವಿಸಿದ್ದು, ಎಂಟು ತಿಂಗಳ ಬಳಿಕ ಪಿಡುಗಿನಿಂದಾಗಿ ದಾಖಲಾದ ಮೊದಲ ಸಾವು ಇದಾಗಿದೆ.

3 ಸಾವಿರ ಬೆಡ್‌ ಸಾಮರ್ಥ್ಯದ ಹೊಸ ಕ್ವಾರಂಟೈನ್‌ ಕೇಂದ್ರ:
ಹಬೆ ಪ್ರಾಂತ್ಯದ ರಾಜಧಾನಿ ಶಿಜ್ವಾಜಂಗ್‌ನಲ್ಲಿ 3 ಸಾವಿರ ಬೆಡ್‌ ಸಾಮರ್ಥ್ಯದ ಕ್ವಾರಂಟೈನ್‌ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವವರನ್ನು ಈ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT