ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ–ಉತ್ತರ ಕೊರಿಯಾ ರೈಲು ಸರಕು ಸಾಗಣೆ ಪುನರಾರಂಭ

Last Updated 17 ಜನವರಿ 2022, 13:57 IST
ಅಕ್ಷರ ಗಾತ್ರ

ಬೀಜಿಂಗ್: ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾ ಜತೆಗಿನ ರೈಲು ಸರಕು ಸಾಗಣೆ ಸಂಬಂಧವನ್ನು ಚೀನಾ ಸೋಮವಾರದಿಂದ ಪುನರಾರಂಭಿಸಿದೆ.‌

ಚೀನಾದ ಡಾನ್‌ಡಂಗ್ ಮತ್ತು ಉತ್ತರ ಕೊರಿಯಾದ ಸಿನುಜು ನಡುವೆ ಹರಿಯುವ ಯಲೆ ನದಿಯ ಮೇಲೆ ಅಳವಡಿಸಲಾಗಿರುವ ರೈಲು ಸೇತುವೆಯ ಮೂಲಕ ಈ ಸರಕು ಸಾಗಣೆ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ತಿಳಿಸಿದ್ದು, ಇನ್ನಷ್ಟು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ವಿಶ್ವಸಂಸ್ಥೆ ಮತ್ತು ಅಮೆರಿಕವು ಈಗಾಗಲೇ ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿದ್ದು, ಸದ್ಯ ಚೀನಾದಿಂದ ಮಾತ್ರ ಅದಕ್ಕೆ ಆರ್ಥಿಕ ಸಹಕಾರ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT