ಭಾನುವಾರ, ಮೇ 9, 2021
19 °C

ಅಮೆರಿಕ–ಜಪಾನ್‌ ಮೈತ್ರಿ ವಿರುದ್ಧ ಚೀನಾ ವಾಗ್ದಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ಅಮೆರಿಕ–ಜಪಾನ್‌ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿರುವ ಚೀನಾ, ‘ಇದು ವಿಭಜನೆಗೆ ಕುಮ್ಮಕ್ಕು ಪ್ರಯತ್ನವಾಗಿದೆ’ ಎಂದು ಹೇಳಿದೆ.

‘ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮೌಲ್ಯ ಹಾಗೂ ಇಂಡೊ–ಫೆಸಿಫಿಕ್ ಪ್ರದೇಶದಲ್ಲಿ ಚೀನಾದ ಚಟುವಟಿಕೆ ಕುರಿತಾಗಿ ಅಮೆರಿಕ–ಜಪಾನ್‌ ಜಂಟಿ ಹೇಳಿಕೆ ನೀಡಿದೆ. ಈ ರಾಷ್ಟ್ರಗಳು ಸಾಮಾನ್ಯ ಅಭಿವೃದ್ಧಿ ಮತ್ತು ದ್ವಿಪಕ್ಷೀಯ ಸಂಬಂಧಕ್ಕಿಂತ ಅದೆಷ್ಟೋ ಮುಂದೆ ಹೋಗಿವೆ’ ಎಂದು ಚೀನಾ ಹೇಳಿದೆ.

ಇದನ್ನೂ ಓದಿ: ಸಮೃದ್ಧ, ಮುಕ್ತ ಇಂಡೊ–ಫೆಸಿಫಿಕ್‌ ಪ್ರದೇಶ ನಿರ್ಮಾಣ: ಅಮೆರಿಕ–ಜಪಾನ್‌

‘ಮುಕ್ತ ಪ್ರದೇಶ ನಿರ್ಮಾಣದ ಹೆಸರಿನಲ್ಲಿ ಇತರ ದೇಶಗಳನ್ನು ವಿಭಜಿಸಲು ಮತ್ತು ತಡೆ ಗೋಡೆಯನ್ನು ಕಟ್ಟಲು ಮೈತ್ರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಹಾಸ್ಯಾಸ್ಪದ’ ಎಂದು ಅಮೆರಿಕದಲ್ಲಿರುವ ಚೀನಾದ ರಾಯಭಾರಿ ತಿರುಗೇಟು ನೀಡಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್‌ ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರು ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಉಭಯ ನಾಯಕರು,ಇಂಡೊ–ಫೆಸಿಫಿಕ್‌ನಲ್ಲಿ ಶಾಂತಿ ಸ್ಥಾಪನೆ ಮತ್ತು ಹಾಂಗ್‌ಕಾಂಗ್‌, ತೈವಾನ್‌ನಲ್ಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು