ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷೆ ಸೇರಿದ ಚೀನಾದ ಉಪಗ್ರಹಗಳು

Last Updated 15 ಸೆಪ್ಟೆಂಬರ್ 2020, 8:18 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾವು ಹಳದಿ ಸಮುದ್ರದ ಹಡಗಿನಿಂದ ಉಡಾವಣೆ ಮಾಡಿದ್ದ ‘ದಿ ಲಾಂಗ್‌ ಮಾರ್ಚ್‌ 11–ಎಚ್‌ವೈ2’ ರಾಕೆಟ್‌‌ ಯಶಸ್ವಿಯಾಗಿ ಅಂತರಿಕ್ಷ ತಲುಪಿದ್ದು, ಅದರಲ್ಲಿದ್ದ ಒಂಬತ್ತು ಉಪಗ್ರಹಗಳು ಕಕ್ಷೆಗೆ ಸೇರಿವೆ ಎಂದು ಚೀನಾ ಡೈಲಿ ದಿನಪತ್ರಿಕೆವರದಿ ಮಾಡಿದೆ.

ಇದು ಎರಡನೇ ಯಶಸ್ವಿ ಸಮುದ್ರ ಆಧಾರಿತ ರಾಕೆಟ್‌ ಉಡಾವಣೆ ಎಂದು ಹೇಳಲಾಗಿದೆ.

‘ದಿ ಲಾಂಗ್‌ ಮಾರ್ಚ್‌ 11–ಎಚ್‌ವೈ2’ ಲಾಂಗ್‌ ಮಾರ್ಚ್‌ 11 ಕುಟುಂಬದ 10ನೇ ರಾಕೆಟ್‌ ಆಗಿದೆ. ‘ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಸ್ವಯಂ ಚಾಲಿತ ‘ಡೆಬೊ 3’ ಹಡಗಿನಿಂದ ಮಂಗಳವಾರ ಬೆಳಿಗ್ಗೆ 9.22ಕ್ಕೆ ರಾಕೆಟ್‌ ಉಡಾವಣೆ ಮಾಡಲಾಯಿತು’ ಎಂದು ಪತ್ರಿಕೆ ವರದಿ ಮಾಡಿದೆ.

ಒಂಬತ್ತೂ ಉಪಗ್ರಹಗಳು ಜಿಲಿನ್‌–1 ಗಾವೊಫೆನ್‌ 03–1 ಗುಂಪಿಗೆ ಸೇರಿವೆ. ‘ಉಡಾವಣೆಯಾದ ನಂತರದ 13 ನಿಮಿಷಗಳಲ್ಲಿ 535 ಕಿಲೊ ಮೀಟರ್ಸ್‌ ಸಂಚರಿಸಿದ ರಾಕೆಟ್‌ ನಂತರ ತಾನು ಹೊತ್ತೊಯ್ದಿದ್ದ ಅತ್ಯುನ್ನತ ಗುಣಮಟ್ಟದ ಭೂ ವೀಕ್ಷಣೆ ಸಾಮರ್ಥ್ಯವಿರುವ ಜಿಲಿನ್‌ 1 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತು. ಒಂಬತ್ತು ಉಪಗ್ರಹಗಳ ಪೈಕಿ ಮೂರು ‘ಸನ್‌ ಸಿಂಕ್ರೊನಸ್‌ ಆರ್ಬಿಟ್‌’ನ ದೃಶ್ಯಾವಳಿ ಹಾಗೂ ಉಳಿದ ಆರು ಛಾಯಾಚಿತ್ರಗಳನ್ನು ಸೆರೆಹಿಡಿಯಲಿವೆ’ ಎಂದೂ ಪತ್ರಿಕೆ ಉಲ್ಲೇಖಿಸಿದೆ.

ಜಿಲಿನ್‌ ಪ್ರಾಂತ್ಯದ ಚಾಂಗ್‌ಚುನ್‌ನಲ್ಲಿರುವ ಚಾಂಗ್‌ಗುವಾಂಗ್‌ ಉಪಗ್ರಹ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಉಪಗ್ರಹಗಳು ತಲಾ 42 ಕೆ.ಜಿ.ತೂಕ ಹೊಂದಿವೆ. ಈ ಉಪಗ್ರಹಗಳು ಕೃಷಿ, ಅರಣ್ಯ ಭೂಮಿಯ ದತ್ತಾಂಶ ಸಂಗ್ರಹಿಸಲೂ ನೆರವಾಗಲಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT