ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಹೊಸ ತಲೆಮಾರಿನ ಹವಾಮಾನ ಉಪಗ್ರಹ ಯಶಸ್ವಿ ಉಡಾವಣೆ

Last Updated 3 ಜೂನ್ 2021, 5:19 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾವು ಹೊಸ ತಲೆಮಾರಿನ ‘ಹವಾಮಾನ ಉಪಗ್ರಹ‘ವನ್ನು ಯೋಜಿತ ಕಕ್ಷೆಗೆ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಈ ಉಪಗ್ರಹವನ್ನು ಹವಾಮಾನ ವಿಶ್ಲೇಷಣೆ, ಪರಿಸರ ಮತ್ತು ವಿಪತ್ತು ಮೇಲ್ವಿಚಾರಣೆ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

ಸಿಚುವಾನ್ ಪ್ರಾಂತ್ಯದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮುಂಜಾನೆ ಲಾಂಗ್ ಮಾರ್ಚ್ -3 ಬಿ ರಾಕೆಟ್ ಮೂಲಕ ಫೆಂಗ್ಯುನ್ -4 ಬಿ (ಎಫ್‌ವೈ -4 ಬಿ) ಉಪಗ್ರಹವನ್ನು ಉಡಾಯಿಸಲಾಗಿದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದ ಹೊಸ ತಲೆಮಾರಿನ ಹವಾಮಾನ ಉಪಗ್ರಹಗಳಲ್ಲಿ ಮೊದಲನೆಯದಾದ ಎಫ್‌ವೈ -4 ಬಿ ಉಪಗ್ರಹವನ್ನು ಹವಾಮಾನ ವಿಶ್ಲೇಷಣೆ ಮತ್ತು ಮುನ್ಸೂಚನೆ ಮತ್ತು ಪರಿಸರ ಮತ್ತು ವಿಪತ್ತು ಮೇಲ್ವಿಚಾರಣೆಯ ಕ್ಷೇತ್ರಗಳಲ್ಲಿ ಬಳಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಈ ಹೊಸ ಉಪಗ್ರಹವು ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಸಂಭವಿಸಬಹುದಾದ ವಿಪತ್ತುಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಕ್ಷೇತ್ರದಲ್ಲಿ ಚೀನಾದ ಈಗಿರುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಜತೆಗೆ, ಹವಾಮಾನ, ಕೃಷಿ, ವಾಯುಯಾನ, ಸಾಗರ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷತ್ರಗಳಿಗೆ ಮಾಹಿತಿ ಮತ್ತು ಭದ್ರತಾ ಸೇವೆಯನ್ನು ಒದಗಿಸಲು ನೆರವಾಗುತ್ತದೆ. ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವಾಹ, ಹಿಮಪಾತದಂತಹ ಶೀತ ಪ್ರದೇಶದ ಅವಘಡಗಳು, ಬರ ಮತ್ತು ಮರಳು ಬಿರುಗಾಳಿ ಸೇರಿದಂತೆ ವಿವಿಧ ವಿಪತ್ತು ಅಂಶಗಳ ಕ್ರಿಯಾತ್ಮಕ ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್‌ಗೂ ಈ ಉಪಗ್ರಹ ನೆರವಾಗುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ಉಪಗ್ರಹದ ವೀಕ್ಷಣಾ ವ್ಯಾಪ್ತಿಯು ಏಷ್ಯಾ, ಮಧ್ಯ ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಇದರಿಂದಾಗಿ ಚಂಡಮಾರುತ ಮತ್ತು ಬಿರುಗಾಳಿಗಳು ಸೇರಿದಂತೆ ವಿಪತ್ತು ಹವಾಮಾನದ ಬಗ್ಗೆ ಚೀನಾದ ಮುನ್ಸೂಚನೆಯ ನಿಖರತೆಯನ್ನು ಈ ಉಪಗ್ರಹ ಜಾಲ ಹೆಚ್ಚು ಸುಧಾರಿಸುತ್ತದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT