ಬುಧವಾರ, ಜೂನ್ 16, 2021
27 °C

ಕೋವಿಡ್‌ ಹಿನ್ನೆಲೆ: ಮೌಂಟ್ ಎವರಸ್ಟ್ ಶಿಖರದಲ್ಲಿ ಪ್ರತ್ಯೇಕ ರೇಖೆಗೆ ಚೀನಾ ನಿರ್ಧಾರ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಮೌಂಟ್‌ ಎವರೆಸ್ಟ್ ಶಿಖರವನ್ನು ನೇಪಾಳದ ದಿಕ್ಕಿನಿಂದ ಏರುವವರಿಂದ ಕೋವಿಡ್‌ ಸೋಂಕು ಹರಡದಂತೆ ತಡೆಯಲು, ಶಿಖರದ ತುದಿಯಲ್ಲಿ ಪ್ರತ್ಯೇಕ ವಿಭಜನಾ ರೇಖೆಯನ್ನು ರೂಪಿಸಲು ಚೀನಾ ನಿರ್ಧರಿಸಿದೆ ಎಂದು ಅಲ್ಲಿನ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಶಿಖರಯಾತ್ರಿಗಳು ಚೀನಾದ ದಿಕ್ಕಿನಿಂದ ಈ ರೇಖೆ ದಾಟದಂತೆ ಗಮನಿಸಲು ಟಿಬೆಟನ್‌ ಶಿಖರಯಾತ್ರಿಗಳ ತಂಡವನ್ನು ರಚಿಸಲಾಗುತ್ತದೆ ಎಂದು ಚೀನಾದ ಕ್ಸಿನುಹಾ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

ಪ್ರತ್ಯೇಕತಾ ರೇಖೆಯನ್ನು ಹೇಗೆ ರೂಪಿಸಲಾಗುತ್ತದೆ ಎಂಬ ಬಗ್ಗೆ ತಕ್ಷಣಕ್ಕೆ ಸ್ಪಷ್ಟತೆ ಇಲ್ಲ. ಶಿಖರವನ್ನು ಉತ್ತರ ದಿಕ್ಕಿನಿಂದ ಅಂದರೆ ಚೀನಾ ಭಾಗದಿಂದ ಏರುವವರು ಈ ರೇಖೆ ದಾಟದಂತೆ ನಿರ್ಬಂಧಿಸಲಾಗುತ್ತದೆ. ಹಾಗೆಯೇ, ದಕ್ಷಿಣ ದಿಕ್ಕಿನಿಂದ ಶಿಖರ ಏರುವವರ ಸಂಪರ್ಕಕ್ಕೆ ಬಾರದಂತೆ ತಡೆಯಲಾಗುತ್ತದೆ ಎಂದು ಹೇಳಿದೆ.

ಈ ಬಗ್ಗೆ ನೇಪಾಳ ಸರ್ಕಾರ ಅಥವಾ ಸಂಬಂಧಿತ ಅಧಿಕಾರಿಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ, ಕೋವಿಡ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಭಯ ದೇಶಗಳು ಮೌಂಟ್‌ ಎವರೆಸ್ಟ್ ಶಿಖರ ಏರುವುದಕ್ಕೆ ನಿರ್ಬಂಧ ಹೇರಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು