ನ್ಯೂಯಾರ್ಕ್ : ಚೀನಾ ಸರ್ಕಾರಕ್ಕೆ ಬಹಳ ದಿನದಿಂದಲೂ ಬೇಕಾಗಿದ್ದ, ಚೀನಾ ಮೂಲದ ಉದ್ಯಮಿಯೊಬ್ಬನನ್ನು 1 ಬಿಲಿಯನ್ ಡಾಲರ್ (₹ 82 ಸಾವಿರ ಕೋಟಿ) ವಂಚನೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿ ಬುಧವಾರ ಬಂಧಿಸಲಾಗಿದೆ.
ಗುವೊ ವೆಂಗ್ವಿ (54) ಬಂಧಿತ ವ್ಯಕ್ತಿ. ಟೆಲಿಫೋನ್ ಹಾಗೂ ಷೇರುಗಳಿಗೆ ಸಂಬಂಧಿಸಿದ ವಂಚನೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ವೆಂಗ್ವಿ ಅವರ ಹಣಕಾಸು ವ್ಯವಹಾರ ನೋಡಿಕೊಳ್ಳುವ ವ್ಯಕ್ತಿ ಮತ್ತು ಸಿಬ್ಬಂದಿ ಮುಖ್ಯಸ್ಥರೂ ಆರೋಪಿಗಳಾಗಿದ್ದಾರೆ.
2014ರಲ್ಲಿ ಚೀನಾವು ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗೆ ಇಳಿದಾಗ ವೆಂಗ್ವಿ ದೇಶ ತೊರೆದು ಆಮೆರಿಕಕ್ಕೆ ಬಂದು ಆಶ್ರಯ ಪಡೆದಿದ್ದ. ಆತನ ವಿರುದ್ಧ ಅತ್ಯಾಚಾರ, ಅಪಹರಣ, ಭ್ರಷ್ಟಾಚಾರ ಮತ್ತು ಇತರ ಆರೋಪಗಳನ್ನು ಹೊರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.