ಸೋಮವಾರ, ಸೆಪ್ಟೆಂಬರ್ 28, 2020
21 °C

ಕೋವಿಡ್–19; ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಪಾಕಿಸ್ತಾನ ಭೇಟಿ ಮುಂದೂಡಿಕೆ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ರಾವುಲ್ಪಿಂಡಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು ದಿನಾಂಕ ನಿಗದಿಯಾಗಿತ್ತು. ಆದರೆ, ಕೋವಿಡ್–19 ಕಾರಣದಿಂದಾಗಿ ಭೇಟಿ ದಿನಾಂಕವನ್ನು ಮುಂದೂಡಲಾಗಿದೆ ಎಂದು ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಯಾವೊ ಜಿಂಗ್‌ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು ಎಂದಿರುವ ಜಿಂಗ್, ಈ ಸಂಬಂಧ ಪಾಕಿಸ್ತಾನ ಮತ್ತು ಚೀನಾ ಸರ್ಕಾರಗಳು ಚರ್ಚಿಸಿ ಹೊಸ ದಿನಾಂಕವನ್ನು ನಿರ್ಧರಿಸಲಿವೆ ಎಂದಿದ್ದಾರೆ.

ಒಂದು ವೇಳೆ ಈ ಭೇಟಿ ನಿಗದಿಯಂತೆ ನಡೆದಿದ್ದರೆ, ಭಾರತ–ಚೀನಾ ಗಡಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಿರ್ಮಾಣವಾಗಿರುವ ಉದ್ವಿಗ್ನತೆಯ ವಿಚಾರ ಚರ್ಚೆಗೆ ಬರುತ್ತಿತ್ತು.

ಇದನ್ನೂ ಓದಿ: ಪಾಂಗಾಂಗ್‌ ಸರೋವರದ ಬಳಿ ಚೀನಾ ಸೇನೆಯಿಂದ ಮತ್ತೆ ಯಥಾಸ್ಥಿತಿ ಉಲ್ಲಂಘನೆ: ಭಾರತ

ಆಗಸ್ಟ್‌ 29–30ರಂದು ಗಡಿಯಲ್ಲಿ ಯಥಾಸ್ಥಿತಿ ಉಲ್ಲಂಘಿಸಿದ್ದ ಚೀನಾ ಸೇನೆ, ಚುಶುಲ್‌ ಪ್ರದೇಶದಲ್ಲಿರುವ ಪಾಂಗಾಂಗ್‌ ಸರೋವರದ ಬಳಿ ಭೂಭಾಗದ ವಸ್ತುಸ್ಥಿತಿ ಬದಲಿಸುವ ಪ್ರಯತ್ನ ನಡೆಸಿತ್ತು. ಆದರೆ, ಈ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು