ಶನಿವಾರ, ಸೆಪ್ಟೆಂಬರ್ 25, 2021
24 °C

ತಾಲಿಬಾನ್‌ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌–ಹಖ್ಖಾನಿ ಗುಂಪಿನ ಸಂಘರ್ಷ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಕಾಬೂಲ್: ಹಖ್ಖಾನಿ ಬೆಂಬಲಿತ ಗುಂಪುಗಳು ಮತ್ತು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ನಡುವೆ ಘರ್ಷಣೆ ನಡೆದಿದೆ. ಪರಿಣಾಮವಾಗಿ ಬರದರ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ.

ಘಟನೆ ಬೆನ್ನಲ್ಲೇ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯ ಮುಖ್ಯಸ್ಥ ಫೈಜ್ ಹಮೀದ್ ಕಾಬೂಲ್‌ಗೆ ತೆರಳಿದ್ದಾರೆ.

ಹಖ್ಖಾನಿ ಮತ್ತು ತಾಲಿಬಾನ್‌ನ ಇತರ ಕೆಲವು ಬಣಗಳು ಹೈಬತುಲ್ಲಾ ಅಖುಂಜಾದರನ್ನು ನಾಯಕನೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ‘ಐಎಎನ್‌ಎಸ್’ ವರದಿ ಮಾಡಿದೆ.

ಓದಿ: 

ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ತಾಲಿಬಾನ್ ಮುಂದಿನ ವಾರಕ್ಕೆ ಮುಂದೂಡಿರುವುದಾಗಿ ತಾಲಿಬಾನ್ ಶನಿವಾರ ತಿಳಿಸಿತ್ತು. ಇದರಿಂದಾಗಿ ಅಫ್ಗಾನಿಸ್ತಾನದ ಆಡಳಿತ ಚುಕ್ಕಾಣಿ ಹಿಡಿಯುವುದು ವಿಳಂಬವಾಗಲಿದೆ.

ಈ ಮಧ್ಯೆ, ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ಸಂಭವಿಸುವ ಸಾಧ್ಯತೆ ಇದೆ’ ಎಂದು ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಮಾರ್ಕ್ ಮಿಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು