ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: 9 ಲಕ್ಷ ದಾಟಿದ ಸಾವಿನ ಸಂಖ್ಯೆ

Last Updated 11 ಸೆಪ್ಟೆಂಬರ್ 2020, 16:36 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್:ಜಗತ್ತಿನಾದ್ಯಂತ ಕೋವಿಡ್–19 ಪ್ರಕರಣಗಳ ಸಂಖ್ಯೆ ಹಾಗೂ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಕ್ರಮವಾಗಿ 2.82 ಕೋಟಿ ಮತ್ತು 9 ಲಕ್ಷದ ಗಡಿ ದಾಟಿವೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ವಿವಿಯ ಮಾಹಿತಿ ಪ್ರಕಾರ, ಇದುವರೆಗೆ ಒಟ್ಟು 2,82,19,714ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ 9,10,460ಕ್ಕೆ ಏರಿಕೆಯಾಗಿದ್ದು, 1,90,41,645 ಸೋಂಕಿತರು ಗುಣಮುಖರಾಗಿದ್ದಾರೆ.

ಅಮೆರಿಕ, ಭಾರತ, ಬ್ರೆಜಿಲ್‌ನಲ್ಲಿ1.52 ಕೋಟಿ ಪ್ರಕರಣ
ಜಗತ್ತಿನಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಅಮೆರಿಕ, ಭಾರತ ಮತ್ತು ಬ್ರೆಜಿಲ್‌ನಲ್ಲಿ ಒಟ್ಟು1,52,02,231 ಪ್ರಕರಣಗಳು ವರದಿಯಾಗಿವೆ.

ಅಮೆರಿಕದಲ್ಲಿ64,01,371 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 24,03,511 ಮಂದಿ ಗುಣಮುಖರಾಗಿದ್ದು,1,91,842ಸೋಂಕಿತರು ಮೃತಪಟ್ಟಿದ್ದಾರೆ.ಭಾರತದಲ್ಲಿ45,62,414 ಪ್ರಕರಣಗಳು ದೃಢಪಟ್ಟಿದ್ದು,35,42,663ಸೋಂಕಿತರು ಚೇತರಿಸಿಕೊಂಡಿದ್ದಾರೆ. ಉಳಿದಂತೆ 76,271 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ ಒಟ್ಟು42,38,446 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ1,29,522 ಸೋಂಕಿತರು ಮೃತಪಟ್ಟಿದ್ದು,36,57,701 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ನೆರೆ ರಾಷ್ಟ್ರ ಪಾಕಿಸ್ತಾಣದಲ್ಲಿ ಕಳೆದ 24 ಗಂಟೆಗಳಲ್ಲಿ548 ಜನರು ಮೃತಪಟ್ಟಿದ್ದಾರೆ. ಇಲ್ಲಿ ಇದುವರೆಗೆ ಒಟ್ಟು3,00,371 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 6,370 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 10,48,257,ಪೆರುವಿನಲ್ಲಿ7,10,067, ಕೊಲಂಬಿಯಾದಲ್ಲಿ6,94,664 ಪ್ರಕರಣಗಳು ವರದಿಯಾಗಿವೆ.

100 ಕೋಟಿ ಜನರಿಗೆ ಸ್ಪುತ್ನಿಕ್–ವಿ ಲಸಿಕೆ
2020-21ರಲ್ಲಿ ಒಂದು ಶತಕೋಟಿಗೂ ಹೆಚ್ಚು ಜನರಿಗೆ ತನ್ನ ಕೋವಿಡ್-19 ಲಸಿಕೆ ‘ಸ್ಪುತ್ನಿಕ್-ವಿ’ ಲಭ್ಯವಾಗಲಿದೆ ಎಂದು ರಷ್ಯಾತಿಳಿಸಿರುವುದಾಗಿಇಂಟರ್‌ಫ್ಯಾಕ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವ ಎರಡು ಒಪ್ಪಂದಗಳಿಗೆಈಗಾಗಲೇ ಸಹಿ ಹಾಕಿದೆ. ಜೊತೆಗೆ ಬ್ರೆಜಿಲ್‌ನ ಬಹಿಯಾದಲ್ಲಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟೆಸ್ಟ್‌ ನಡೆಸಲು ಸಿದ್ಧತೆ ನಡೆದಿದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT