ಬೆಂಗಳೂರು: ಜಗತ್ತಿನಾದ್ಯಂತ ವಾಣಿಜ್ಯ ವ್ಯವಸ್ಥೆಯ ಮೇಲೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಕೋವಿಡ್–19 ಪರಿಣಾಮ ಬೀರಿದೆ. ಭಾರತ ಸೇರಿದಂತೆ ವಿಶ್ವದ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಹೊಡೆತಕ್ಕೆ ಸಿಲುಕಿವೆ. ಅಕ್ಕ–ಪಕ್ಕದ ಮನೆಯವರು, ಸಂಬಂಧಿಕರು, ಆಪ್ತರು, ರಕ್ತ ಸಂಬಂಧಿಗಳು, ಸ್ನೇಹಿತರು, ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು,...ಹೀಗೆ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು. ಇಡೀ ಜಗತ್ತು ಲಸಿಕೆಗಾಗಿ ಕಾಯುತ್ತಿದೆ.

ಕೋವಿಡ್ ದೃಢಪಟ್ಟ ಪ್ರಕರಣಗಳಂತೂ ನಿತ್ಯ ಏರಿಕೆಯಾಗುತ್ತಲೇ ಇದೆ. ಅಮೆರಿಕ ಮತ್ತು ಭಾರತದಲ್ಲಿ ಗುಣಮುಖರಾದವರು ಮತ್ತು ಹೊಸ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಸಾಗಿದೆ. ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 73,61,477 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಈವರೆಗೂ 2,09,777 ಮಂದಿ ಮೃತಪಟ್ಟಿದ್ದರೆ, 46,09,477 ಜನರು ಚೇತರಿಸಿಕೊಂಡಿದ್ದಾರೆ.

ಜಗತ್ತಿನಾದ್ಯಂತ 3.35 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.06 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ವರ್ಡೊ ಮೀಟರ್ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಈವರೆಗೂ 2.48 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 76,64,816 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

ಭಾರತದಲ್ಲಿ ಈವರೆಗೂ ಸೋಂಕಿನಿಂದ 96,351 ಮಂದಿ ಸಾವಿಗೀಡಾಗಿದ್ದರೆ, ಬ್ರೆಜಿಲ್‌ನಲ್ಲಿ 1,42,161 ಮಂದಿ, ಮೆಕ್ಸಿಕೊದಲ್ಲಿ 76,430 ಜನರು ಮೃತಪಟ್ಟಿದ್ದಾರೆ. ಚೀನಾದಲ್ಲಿ ಸೋಮವಾರ ಕೋವಿಡ್–19 ದೃಢಪಟ್ಟ 12 ಹೊಸ ಪ್ರಕರಣಗಳು ದಾಖಲಾಗಿವೆ. ಚೀನಾದಲ್ಲಿ ಒಟ್ಟು 85,384 ಪ್ರಕರಣಗಳು ದಾಖಲಾಗಿದ್ದು, 4,634 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಷ್ಟ್ರಗಳು:

* ಅಮೆರಿಕ: 25,42,223
* ಭಾರತ: 9,48,095
* ಬ್ರೆಜಿಲ್: 5,21,984
* ಫ್ರಾನ್ಸ್: 4,15,405
* ರಷ್ಯಾ: 1,93,268
* ಮೆಕ್ಸಿಕೊ: 1,30,056
* ಅರ್ಜೆಂಟಿನಾ: 1,30,304
* ಪೆರು: 1,05,401
* ಉಕ್ರೇನ್: 1,08,856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.