ವಿಶ್ವಸಂಸ್ಥೆ: ಜಾಗತಿಕವಾಗಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2 ಕೋಟಿ ಸಮೀಪಿಸುತ್ತಿದ್ದ ಒಟ್ಟಾರೆ 1.20 ಕೋಟಿ ಸೋಂಕಿತರು ಗುಣಮುಖರಾಗಿದ್ದು 65 ಸಾವಿರ ಜನರ ಸ್ಥಿತಿ ಗಂಭೀರವಾಗಿದೆ.

ಶುಕ್ರವಾರ ಬೆಳಗ್ಗೆ 8.30 ವರೆಗಿನ ‘ವರ್ಡೊಮೀಟರ್’ ಮಾಹಿತಿಯ ಪ್ರಕಾರ ಜಗತ್ತಿನಲ್ಲಿ 61,81,664 ಸಕ್ರಿಯ ಪ್ರಕರಣಗಳಿವೆ. ಇವುಗಳ ಪೈಕಿ 61,16,436 ಗಂಭೀರವಲ್ಲದ ಬೇಗನೆ ಗುಣಮುಖವಾಗುವ ಪ್ರಕರಣಗಳಿವೆ. ಇನ್ನು 65,228 ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದ್ದು ಇವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

1,30,74,988 ಸೋಂಕಿತರ ಪೈಕಿ 1,23, 57,308 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಉಳಿದಂತೆ 7,17,680 ಸೋಂಕಿತರ ಮೃತಪಟ್ಟಿದ್ದಾರೆ. ಒಟ್ಟಾರೆ ಪ್ರಕರಣಗಳ ಪೈಕಿ ಕೊರೊನಾ ಸೋಂಕಿತರಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ 95 ರಷ್ಟಿದ್ದು ಸಾವನ್ನಪ್ಪುವವರ ಪ್ರಮಾಣ ಕೇವಲ ಶೇ 5ರಷ್ಟು ಎಂದು ವರ್ಡೋಮೀಟರ್ ವರದಿ ಮಾಡಿದೆ.

ಜಗತ್ತಿನಲ್ಲಿ ಇಲ್ಲಿನ ತನಕ 1,92,56,652 ಕೋವಿಡ್–19 ಪ್ರಕರಣಗಳು ದಾಖಲಾಗಿದ್ದು 1,23,57,308 ಮಂದಿ ಗುಣಮುಖರಾಗಿದ್ದಾರೆ. 7,17,680 ಸೋಂಕಿತರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಸೋಂಕಿತರ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ. ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಬ್ರೆಜಿಲ್, ಭಾರತ, ರಷ್ಯಾ ದೇಶಗಳಿವೆ.

ಅಮೆರಿಕದಲ್ಲಿ 50,32,179, ಬ್ರೆಜಿಲ್‌ನಲ್ಲಿ 29,17,562,ಭಾರತದಲ್ಲಿ 20,25,409,ರಷ್ಯಾದಲ್ಲಿ 8,71,894 ಹಾಗೂ ದಕ್ಷಿಣ ಆಫ್ರಿಕಾದಲ್ಲಿ 5,38,184 ಪ್ರಕರಣಗಳು ದಾಖಲಾಗಿವೆ. 50 ಲಕ್ಷ ಪ್ರಕರಣಗಳನ್ನು ದಾಖಲಿಸಿರುವ ಅಮೆರಿಕದಲ್ಲಿ1.62,804 ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.