ಶನಿವಾರ, ಜೂನ್ 19, 2021
28 °C

Covid-19 World Update | 2.14 ಕೋಟಿ ಕೊರೊನಾ ಸೋಂಕಿತರು, 7.71 ಲಕ್ಷ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Coronavirus World Updates

ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,14,62,593ಗೆ ಏರಿದ್ದು, 7,71,074 ಮಂದಿ ಮೃತಪಟ್ಟಿದ್ದಾರೆ. 1,34,47,588 ಸೋಂಕಿತರು ಗುಣಮುಖರಾಗಿದ್ದಾರೆ.

ಅಮೆರಿಕ 53,61,165 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,69,483 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 18,18,527 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದನ್ನೂ ಓದಿ: 

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 33,17,096 ಪ್ರಕರಣಗಳು ಪತ್ತೆಯಾಗಿವೆ. 26,22,878 ಸೋಂಕಿತರು ಗುಣಮುಖರಾಗಿದ್ದು, 1,07,232 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 25,89,682 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 18,62,258 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 49,980 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ರಷ್ಯಾದಲ್ಲಿ 9,15,808, ದಕ್ಷಿಣ ಆಫ್ರಿಕಾದಲ್ಲಿ 5,83,653, ಪೆರುವಿನಲ್ಲಿ 5,16,296, ಚಿಲಿಯಲ್ಲಿ 3,83,902, ಇರಾನ್‌ನಲ್ಲಿ 341,070, ಇಂಗ್ಲೆಂಡ್‌ನಲ್ಲಿ 3,19,232 ಮತ್ತು ಸ್ಪೇನ್‌ನಲ್ಲಿ 3,42,813 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,791, ಇಟಲಿಯಲ್ಲಿ 35,392, ಮೆಕ್ಸಿಕೊದಲ್ಲಿ 56,543, ಪ್ರಾನ್ಸ್‌ನಲ್ಲಿ 30,410, ಸ್ಪೇನ್‌ನಲ್ಲಿ 28,617, ಪೆರುವಿನಲ್ಲಿ 25,856, ರಷ್ಯಾದಲ್ಲಿ 15,585, ಚಿಲಿಯಲ್ಲಿ 10,395, ದಕ್ಷಿಣ ಆಫ್ರಿಕಾದಲ್ಲಿ 11,677 ಮತ್ತು ಪಾಕಿಸ್ತಾನದಲ್ಲಿ 6,168 ಜನರು ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು