ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರ ಪ್ರಯಾಣದ ಮೇಲಿನ ನಿರ್ಬಂಧ ಸಡಿಲಗೊಳಿಸಿದ ಬ್ರಿಟನ್‌

ಕೆಂಪುಪಟ್ಟಿಯಿಂದ ಹಳದಿಪಟ್ಟಿಗೆ ಭಾರತ
Last Updated 8 ಆಗಸ್ಟ್ 2021, 5:28 IST
ಅಕ್ಷರ ಗಾತ್ರ

ಲಂಡನ್‌: ಭಾರತೀಯರು ಬ್ರಿಟನ್‌ಗೆ ಪ್ರಯಾಣಿಸುವುದರ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಭಾನುವಾರ ಸಡಿಲಿಸಲಾಗಿದೆ. ಭಾರತವನ್ನು ‘ಕೆಂಪು ಪಟ್ಟಿ’ಯಿಂದ ‘ಹಳದಿ ಪಟ್ಟಿ’ಗೆ ಸೇರಿಸಲಾಗಿದೆ.

ಈ ಕ್ರಮದಿಂದಾಗಿ, ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪಡೆದಿರುವ ಭಾರತದ ಪ್ರಯಾಣಿಕರು ಬ್ರಿಟನ್‌ನಲ್ಲಿ 10 ದಿನಗಳ ಕಾಲ ಹೋಟೆಲ್‌ ಕ್ವಾರಂಟೈನ್‌ನಲ್ಲಿ ಇರಬೇಕಾದ ಅಗತ್ಯವಿಲ್ಲ. ಅದರ ಬದಲಿಗೆ ಅವರು 10 ದಿನಗಳ ಕಾಲ ಮನೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಸಾಮಾಜಿಕ ಸಂರಕ್ಷಣೆ ಇಲಾಖೆ (ಡಿಎಚ್ಎಸ್‌ಸಿ) ತಿಳಿಸಿದೆ.

ಬ್ರಿಟನ್‌ಗೆ ಬಂದ ನಂತರ, ಸರ್ಕಾರ ಅನುಮೋದಿಸಿದ ಆರೈಕೆ ಕೇಂದ್ರಗಳಲ್ಲಿ 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಬೇಕು ಎಂಬ ನಿರ್ಬಂಧ ಇತ್ತು. ಇದಕ್ಕಾಗಿ ಹೆಚ್ಚುವರಿಯಾಗಿ ತಲಾ ₹ 1.80 ಲಕ್ಷ ಶುಲ್ಕ ನೀಡಬೇಕಾಗಿತ್ತು. ಈಗ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

18 ವರ್ಷದೊಳಗಿನವರು ಮತ್ತು ಬ್ರಿಟನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಮನೆ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿಯ ವಿನಾಯಿತಿ ಯುರೋಪಿಯನ್‌ ಒಕ್ಕೂಟ ಮತ್ತು ಅಮೆರಿಕದಲ್ಲಿ ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದವರಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT