ಲಂಡನ್: ಜಾಗತಿಕವಾಗಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಬ್ರಿಟನ್, ದಕ್ಷಿಣಾ ಕೊರಿಯಾ ದೇಶಗಳಲ್ಲಿ ಸೋಂಕಿನ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ.

ಕೊರಿಯಾದ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಇರುವವರಿಗೆ ದಂಡ ಹಾಕುವ ಕಾನೂನನ್ನು ಜಾರಿ ಮಾಡಲಾಗಿದೆ. ಬ್ರಿಟನ್‌ನಲ್ಲಿ ಸೋಂಕಿನ ಪ್ರದೇಶಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಿ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ. ಇನ್ನು ಇಂಡೋನೆಷ್ಯಾದಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲ ಮಾಡಲಾಗಿದೆ.

ಇನ್ನು ಜಗತ್ತಿನಲ್ಲಿ ಈ ವರೆಗೆ ಕೋವಿಡ್‌ನಿಂದಾಗಿ 10,75,942 ಮಂದಿ ಮೃತಪಟ್ಟಿದ್ದು 2,59,99,799 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 3,74,08,593 ಎಂದು ಅಮೆರಿಕದ ‘ಜಾನ್ಸ್ ಹಾಪ್‌ಕಿನ್ಸ್ ಕೋವಿಡ್ ಟ್ರ್ಯಾಕರ್‘ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ವಿಶ್ವದಲ್ಲಿ 83,11,735ಸಕ್ರಿಯ ಪ್ರಕರಣಗಳಿದ್ದು, 68,735ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಕೋವಿಡ್ ಟ್ರ್ಯಾಕರ್ ವೆಬ್‌ಸೈಟ್ ‘ವರ್ಲ್ಡೋಮೀಟರ್’ ತಿಳಿಸಿದೆ.

ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿ, ಬ್ರೆಜಿಲ್ ಮೂರನೇ ಸ್ಥಾನದಲ್ಲಿ ಮುಂದುವರೆದಿವೆ. ಅಮೆರಿಕದಲ್ಲಿ77,62,546 , ಭಾರತದಲ್ಲಿ 70,53,806 ಹಾಗೂ ಬ್ರೆಜಿಲ್‌ನಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 50, 94,979ಕ್ಕೆ ಏರಿಕೆಯಾಗಿದೆ.

ರಷ್ಯಾ ಮತ್ತು ಕೊಲಂಬಿಯಾ ದೇಶಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

ಲಸಿಕೆಯ ಪ್ರಾಯೋಗಿಕ ಪರೀಕ್ಷೆಯು ಮುಂದುವರೆದಿದ್ದು ಭಾರತದಲ್ಲಿ ಬರುವ ಜೂನ್ ಅಂತ್ಯ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.