ಗುರುವಾರ , ಡಿಸೆಂಬರ್ 3, 2020
23 °C

Covid-19 World Update: ಅಮೆರಿಕದಲ್ಲಿ ಮತದಾನದ ದಿನವೇ 87 ಸಾವಿರ ಹೊಸ ಪ್ರಕರಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

covid-19

ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷಿಯ ಚುನಾವಣೆಯ ಮತದಾನದ ದಿನವೇ 87,699 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಯುರೋಪ್‌ ದೇಶಗಳಾದ ಜರ್ಮನಿ, ಬೆಲ್ಜಿಯಂ, ಆಸ್ಟ್ರಿಯ, ಫ್ರಾನ್ಸ್‌, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ದೇಶಗಳಲ್ಲಿ  ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಈಗಾಗಲೇ ಫ್ರಾನ್ಸ್‌  ಮತ್ತು ಇಂಗ್ಲೆಂಡ್‌ನಲ್ಲಿ ನಾಲ್ಕು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

2020ರ ಅಂತ್ಯಕ್ಕೆ ರಷ್ಯಾದಲ್ಲಿ ಸಾಮೂಹಿಕವಾಗಿ ಲಸಿಕೆ ಹಾಕಲಾಗುವುದು ಎಂದು ರಷ್ಯಾ ಸರ್ಕಾರ ಪ್ರಕಟಿಸಿದೆ. ಜಮರ್ನಿ ತಯಾರಿಸಿರುವ ಕೋವಿಡ್‌ ಲಸಿಕೆಯ ಪ್ರಾಯೋಗಿಕ ಪರೀಕ್ಷೆ 2ನೇ ಹಂತದಲ್ಲಿದ್ದು 2021ರ ಮಾರ್ಚ್‌ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಜರ್ಮನಿ ಸರ್ಕಾರ ತಿಳಿಸಿದೆ. 

ಇದನ್ನೂ ಓದಿ: 

ಅಮೆರಿಕದಲ್ಲಿ ಒಂದೇ ದಿನ 87,699 ಮಂದಿ ಸೋಂಕಿತರಾಗಿದ್ದು, 499 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 95,71,007 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 2.36 ಲಕ್ಷಕ್ಕೂ ಹೆಚ್ಚು ಸೋಂಕಿತರು ಅಸುನೀಗಿದ್ದಾರೆ. 61.58 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ವರ್ಲ್ಡೋಮೀಟರ್ ವೆಬ್‌ಸೈಟ್ ಅಂಕಿಅಂಶ ಪ್ರಕಾರ ಈವರೆಗೆ 4,74,85,473 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 1,21,3,778 ಜನ ಸಾವಿಗೀಡಾಗಿದ್ದಾರೆ. 3,41,33,230 ಕೋಟಿಗೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು