ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: 3 ಕೋಟಿಯತ್ತ ಸಾಗಿದ ಸೋಂಕಿತರ ಸಂಖ್ಯೆ

Last Updated 17 ಸೆಪ್ಟೆಂಬರ್ 2020, 1:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಗತ್ತಿನಾದ್ಯಂತ ಕೋವಿಡ್‌–19 ಸೋಂಕು ಪ್ರಕರಣಗಳ ಸಂಖ್ಯೆ ಮೂರು ಕೋಟಿ ಸನಿಹಕ್ಕೆ ತಲುಪಿದೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ವಿವಿಯ ಮಾಹಿತಿ ಪ್ರಕಾರ ಇದುವರೆಗೆ ಒಟ್ಟು 2,97,43,406 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 9,38,820 ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ2,02,03,359 ಸೋಂಖಿತರು ಗುಣಮುಖರಾಗಿದ್ದಾರೆ.

ಹೆಚ್ಚು ಸೋಂಕಿತರು ಗುಣಮುಖರಾಗಿರುವುದು ಭಾರತದಲ್ಲಿ
ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈ ವರೆಗೆ ಒಟ್ಟು 39,42,360 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 50,20,359 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 82,066 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 44,19,083 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 38,35,119 ಮಂದಿ ಗುಣಮುಖರಾಗಿದ್ದು, 1,34,106 ಸೋಂಕಿತರು ಮೃತಪಟ್ಟಿದ್ದಾರೆ. ಹೆಚ್ಚು ಸೋಂಕಿತರನ್ನು ಹೊಂದಿರುವಅಮೆರಿಕದಲ್ಲಿ 66.27 ಲಕ್ಷ ಪ್ರಕರಣಗಳು ದೃಢಪಟ್ಟಿವೆ.25.25 ಲಕ್ಷ ಸೋಂಕಿತರು ಜನರು ಗುಣಮುಖರಾಗಿದ್ದಾರೆ.1.96ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ.

ರಷ್ಯಾ (10.75) ಪೆರು (7.38) ಕೊಲಂಬಿಯಾ (7.28) ಮೆಕ್ಸಿಕೊ (6.76) ದಕ್ಷಿಣ ಆಫ್ರಿಕಾ (6.53) ಸ್ಪೇನ್‌ (6.14) ಅರ್ಜೆಂಟಿನಾ (5.89) ರಾಷ್ಟ್ರಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.

ಪ್ರವಾಸಿಗರಿಗೆಥಾಯ್ಲೆಂಡ್ ಸ್ವಾಗತ
ಪ್ರವಾಸಿಗರಿಗೆ ಅಕ್ಟೋಬರ್‌ನಿಂದ ವಿಶೇಷ ವೀಸಾ ಸೌಲಭ್ಯ ಒದಗಿಸಲು ಥಾಯ್ಲೆಂಡ್‌ ಸಿದ್ಧತೆ ನಡೆಸಿದೆ. 90ರಿಂದ 280 ದಿನಗಳವರೆಗೆ ಉಳಿಯಲು ಯೋಜಿಸಿರುವ ಪ್ರವಾಸಿಗರಿಗೆ ವೀಸಾ ಸೌಲಭ್ಯ ಕಲ್ಪಿಸಲು ಪ್ರಧಾನಿ ಪ್ರಯುಥ್‌ ಛಾನ್‌–ಓಚಾ ಅವರ ಸಂಪುಟ ಅನುಮೋದನೆ ನೀಡಿದೆ.

ಪ್ರವಾಸಿಗರು ದೇಶಕ್ಕೆ ಆಗಮಿಸಿದ ತಕ್ಷಣ ಹೋಟೆಲ್‌ ಅಥವಾ ಆಸ್ಪತ್ರೆಗಳಲ್ಲಿ 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿರಬೇಕಿರುವುದು ಕಡ್ಡಾಯವಾಗಿದೆ.

₹ 12 ಸಾವಿರ ಕೋಟಿ ವಿನಿಯೋಗಿಸಲು ಬದ್ಧ: ಜ‍ಪಾನ್
ವಿಶ್ವಸಂಸ್ಥೆಯ ಕೋವಿಡ್–19 ಲಸಿಕೆ ಕಾರ್ಯಕ್ರಮದ ಭಾಗವಾಗಿ 165 ಮಿಲಿಯನ್ ಡಾಲರ್‌ (ಅಂದಾಜು ₹ 12 ಸಾವಿರ ಕೋಟಿ) ವಿನಿಯೋಗಿಸಲು ಬದ್ಧವಾಗಿರುವುದಾಗಿ ಜ‍ಪಾನ್‌ ತಿಳಿಸಿದೆ.

ವಿಶ್ವಸಂಸ್ಥೆಯಕೊವ್ಯಾಕ್ಸ್‌ (COVAX) ಕಾರ್ಯಕ್ರಮವು ಪ್ರಪಂಚದಾದ್ಯಂತದ ಕೊರೊನಾವೈರಸ್‌ ಸೋಂಕು ನಿಯಂತ್ರಿಸುವ ಸಲುವಾಗಿ ಲಸಿಕೆಯನ್ನುಖರೀದಿಸಲು ಮತ್ತು ವಿತರಿಸಲು ನೆರವಾಗುವ ಗುರಿ ಹೊಂದಿದೆ. ಆದರೆ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳುದ್ವಿಪಕ್ಷೀಯ ಒಪ್ಪಂದಗಳ ಮೂಲಕತಮ್ಮದೇ ಆದ ಸರಬರಾಜು ಮಾರ್ಗ ರೂಪಿಸಿಕೊಂಡಿವೆ.

ಬಿಗಡಯಿಸಿದ ಮ್ಯಾಡ್ರಿಡ್ ಪರಿಸ್ಥಿತಿ; ಶುಕ್ರವಾರದಿಂದ ಲಾಕ್‌ಡೌನ್‌
ಸ್ಪೇನ್‌ನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಮ್ಯಾಡ್ರಿಡ್‌ನಲ್ಲಿ ಶುಕ್ರವಾರದಿಂದ ಲಾಕ್‌ಡೌನ್‌ ಜೊತೆಗೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲುಉದ್ದೇಶಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ವಿವಿಯ ಮಾಹಿತಿ ಪ್ರಕಾರ ಸ್ಪೇನ್‌ನಲ್ಲಿ ಸದ್ಯ6,14,360 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 30,243 ಸೋಂಕಿತರು ಮೃತಪಟ್ಟಿದ್ದು,1,50,376 ಗುಣಮುಖರಾಗಿದ್ದಾರೆ. ಇನ್ನೂ4.33 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಒಂದರಷ್ಟು ಮ್ಯಾಡ್ರಿಡ್‌ನಲ್ಲಿಯೇ ಇವೆ ಎಂದು ವರದಿಯಾಗಿದೆ.

ಲಾಕ್‌ಡೌನ್‌ ಚಿಂತನೆ ಬಗ್ಗೆ ಮಾತನಾಡಿರುವ ಕೋವಿಡ್–19 ನಿಯಂತ್ರಣಾಧಿಕಾರಿ ಅಂಟೊನಿಯೊ ಝಪಾಟೆರೊ, ‘ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೆವು. ಆದರೆ ಅವು ಸಾಲುತ್ತಿಲ್ಲ. ಜನರಲ್ಲಿ ನಿರ್ಲಕ್ಷದ ಮನೋಧೋರಣೆ ಕಂಡು ಬಂದಿದೆ. ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ತಿಂಗಳೊಳಗೆ ಲಸಿಕೆ: ಟ್ರಂಪ್‌ ಭರವಸೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೋವಿಡ್–19 ಲಸಿಕೆಯ ಬಗ್ಗೆ ಮತ್ತೊಮ್ಮೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಾವು ಲಸಿಕೆಗಾಗಿ ವಾರಗಳಿಂದ ಕಾದಿದ್ದೇವೆ. ಅದು ನಿಮಗೂ ತಿಳಿದಿದೆ. ಇನ್ನು ಮೂರು ಅಥವಾ ನಾಲ್ಕು ವಾರಗಳಲ್ಲಿ ಲಸಿಕೆ ಲಭ್ಯವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT