Covid-19 World Update: ಬ್ರಿಟನ್‌ನಲ್ಲಿ ಒಂದೇ ದಿನ 11,299 ಪ್ರಕರಣ, 608 ಸಾವು

ಲಂಡನ್: ಬ್ರಿಟನ್‌ನಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮುಂದುವರಿದಿದ್ದು, ಒಂದೇ ದಿನ 11,299 ಮಂದಿ ಸೋಂಕಿತರಾಗಿದ್ದಾರೆ. 608 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಬ್ರಿಟನ್‌ನಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 15.38 ಲಕ್ಷ ದಾಟಿದೆ. 55,838 ಮಂದಿ ಅಸುನೀಗಿದ್ದಾರೆ.
ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರಿರುವ ಅಮೆರಿಕದಲ್ಲಿ ಒಂದೇ ದಿನ 9,785 ಜನರಲ್ಲಿ ಸೋಂಕು ದೃಢಪಟ್ಟಿದೆ. 229 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ಈವರೆಗೆ 1.27 ಕೋಟಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 2.63 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 75.54 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಸ್ಪುಟ್ನಿಕ್-ವಿ ಶೇ 95ರಷ್ಟು ಪರಿಣಾಮಕಾರಿ: 1 ಡೋಸ್ ಬೆಲೆ 10 ಡಾಲರ್ಗಿಂತ ಕಡಿಮೆ
‘ವರ್ಲ್ಡೊ ಮೀಟರ್’ ದತ್ತಾಂಶಗಳ ಪ್ರಕಾರ ವಿಶ್ವದಾದ್ಯಂತ ಈವರೆಗೆ 5.97 ಕೋಟಿಗೂ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 14 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 4.13 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಗತ್ತಿನಾದ್ಯಂತ 1.70 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿವೆ.
ಏಷ್ಯಾದಲ್ಲಿ ಅತಿ ಹೆಚ್ಚು ಕೋವಿಡ್–19 ಪ್ರಕರಣಗಳ ಪೈಕಿ ಭಾರತದ ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ ಇದ್ದು, ಅಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5 ಲಕ್ಷ ದಾಟಿದೆ. ಸೋಂಕಿನಿಂದ 16 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ನೇಪಾಳದಲ್ಲಿ ಸೋಂಕಿನಿಂದ ಗುಣಮುಖರಾಗಿರುವ ಪ್ರಮಾಣ ಶೇ 90.9ಕ್ಕೆ ಏರಿಕೆಯಾಗಿದೆ. ನೇಪಾಳದಲ್ಲಿ 2,02,067 ಮಂದಿ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: Covid-19 Karnataka Update: 8.4 ಲಕ್ಷ ಸೋಂಕಿತರು ಗುಣಮುಖ
ಸದ್ಯ ವಿಶ್ವದಲ್ಲಿ ಅತಿಹೆಚ್ಚು ಪ್ರಕರಣಗಳಿರುವ ದೇಶಗಳ ಯಾದಿಯಲ್ಲಿ ಒಟ್ಟು ಪ್ರಕರಣಗಳ ಪೈಕಿ ಭಾರತ (91.93 ಲಕ್ಷಕ್ಕೂ ಅಧಿಕ) ಎರಡನೇ ಸ್ಥಾನದಲ್ಲಿದ್ದರೆ, ಮೃತರ ಸಂಖ್ಯೆ ಆಧಾರದಲ್ಲಿ ಬ್ರೆಜಿಲ್ (1.69 ಲಕ್ಷಕ್ಕೂ ಹೆಚ್ಚು ಸಾವು) ಎರಡನೇ ಸ್ಥಾನದಲ್ಲಿದೆ.
ಸದ್ಯ ಭಾರತದಲ್ಲಿ 4.41 ಲಕ್ಷ, ಬ್ರೆಜಿಲ್‌ನಲ್ಲಿ 4.73 ಲಕ್ಷ, ಫ್ರಾನ್ಸ್‌ನಲ್ಲಿ 19.42 ಲಕ್ಷ, ಇಟಲಿಯಲ್ಲಿ 7.96 ಲಕ್ಷ, ಬೆಲ್ಜಿಯಂನಲ್ಲಿ 5.08 ಲಕ್ಷ ಹಾಗೂ ರಷ್ಯಾದಲ್ಲಿ 4.66 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.