ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಬೆಂಬಲಿಗರಿಗೆ ಪಾಕಿಸ್ತಾನದಲ್ಲಿ ಪಂಚತಾರಾ ಆತಿಥ್ಯ–ಭಾರತ ಆಕ್ಷೇಪ

Last Updated 19 ಜನವರಿ 2022, 12:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟಕ್ಕೆ ಕಾರಣಕರ್ತರಾದ ಅಪರಾಧ ಜಾಲದವರು ಪಾಕಿಸ್ತಾನದಲ್ಲಿ ಪಂಚತಾರಾ ಆತಿಥ್ಯ ಪಡೆಯುತ್ತಿದ್ದು, ಸರ್ಕಾರವೇ ಅವರಿಗೆ ರಕ್ಷಣೆಯನ್ನೂ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಆರೋಪಿಸಿದ್ದಾರೆ.

ಇಲ್ಲಿ ಮಂಗಳವಾರ ಗ್ಲೋಬಲ್‌ ಕೌಂಟರ್‌ ಟೆರರಿಸಂ ಕೌನ್ಸಿಲ್‌ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಮಾವೇಶ 2022ರಲ್ಲಿ ಮಾತನಾಡಿದ ಅವರು,ಪಾಕಿಸ್ತಾನದಲ್ಲಿ ಎಲ್‌ಇಟಿ ಮತ್ತು ಜೆಇಎಂ ಸಂಘಟನೆಗಳೂ ಬಲಗೊಳ್ಳುತ್ತಿವೆ. ಅಫ್ಗಾನಿಸ್ತಾನದಲ್ಲಿ ಈಚೆಗೆ ನಡೆದಿರುವ ಬೆಳವಣಿಗೆಗಳಿಂದ ಉಗ್ರ ಸಂಘಟನೆಗಳಿಗೆ ಮತ್ತೆ ಶಕ್ತಿ ಬರುವಂತಾಗಿದೆ ಎಂದರು.

2020ರಲ್ಲಿ ಭಾರತವು ದಾವೂದ್‌ ಇಬ್ರಾಹಿಂ ಸಹಿತ 88 ಭಯೋತ್ಪಾದನಾ ಗುಂಪುಗಳನ್ನು ನಿಷೇಧಿಸಿದ್ದು. ಆ ಬಳಿಕವಷ್ಟೇ ಪಾಕಿಸ್ತಾನವು ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿ ಇರುವುದನ್ನು ಒಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT